Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಸಾರಿಗೆ ಇಲಾಖೆ ಬೆನ್ನಲ್ಲೇ ಪೊಲೀಸ್‌ ಇಲಾಖೆಯಲ್ಲು ಇನ್ಮುಂದೆ ರೀಲ್ಸ್ ಮಾಡುವಂತಿಲ್ಲ

ಸಾರಿಗೆ ಇಲಾಖೆ ಬೆನ್ನಲ್ಲೇ ಪೊಲೀಸ್‌ ಇಲಾಖೆಯಲ್ಲು ಇನ್ಮುಂದೆ ರೀಲ್ಸ್ ಮಾಡುವಂತಿಲ್ಲ

Sampriya

ಬೆಂಗಳೂರು , ಮಂಗಳವಾರ, 23 ಜುಲೈ 2024 (17:19 IST)
Photo Courtesy X
ಬೆಂಗಳೂರು: ಕರ್ತವ್ಯದಲ್ಲಿರುವಾಗ, ಪೊಲೀಸ್ ಸಮವಸ್ತ್ರದಲ್ಲಿ ಪೋಟೋ, ರೀಲ್ಸ್‌ಗಳನ್ನು ಮಾಡುವ ಪೊಲೀಸರ ವಿರುದ್ಧ ಕಠಿಣ ಕ್ರಮದ ಎಚ್ಚರಿಕೆಯನ್ನು ನಗರ ಪೊಲೀಸ್ ಆಯುಕ್ತ ಬಿ ದಯಾನಂದ ಅವರು ನೀಡಿದ್ದಾರೆ.

ಪ್ರಸ್ತುತ ಸಾಮಾಜಿಕ ಜಾಲತಾಣದಲ್ಲಿ ಫೇಮಸ್ ಆಗಲು ಪೊಲೀಸ್ ಅಧಿಕಾರಿಗಳು ಕರ್ತವ್ಯದಲ್ಲಿರುವಾಗ ರೀಲ್ಸ್ ಮಾಡಿ ಅಪ್ಲೋಡ್ ಮಾಡುತ್ತಿದ್ದಾರೆ. ಈ ವಿಚಾರ ತಿಳಿದು ಇದೀಗ  ಪೊಲೀಸ್ ಆಯುಕ್ತರು ಈ ಕ್ರಮ ಕೈಗೊಂಡಿದ್ದಾರೆ. ಈ ಬಗ್ಗೆ ಇಂದು ಮಾಧ್ಯಮಗಳ ಜತೆ ಮಾತನಾಡಿದ ಅವರು,  ಸಮವಸ್ತ್ರದಲ್ಲಿರುವಾಗ ತಮ್ಮ ವೈಯಕ್ತಿಕ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ಸಂಬಂಧವಿಲ್ಲದ ರೀಲ್ಸ್ ಗಳನ್ನು ಪೋಸ್ಟ್ ಮಾಡದಂತೆ ಪೊಲೀಸ್ ಅಧಿಕಾರಿಗಳಿಗೆ ನಿರ್ದೇಶನ ನೀಡಿರುವುದಾಗಿ ತಿಳಿಸಿದರು.

"ಪೊಲೀಸ್ ಸಮವಸ್ತ್ರವು ಸಾರ್ವಜನಿಕರ ಬಗೆಗಿನ ಬದ್ಧತೆ, ಸಮರ್ಪಣೆ ಮತ್ತು ಹೊಣೆಗಾರಿಕೆಯ ಸಂಕೇತವಾಗಿದೆ. ಅದನ್ನು ಧರಿಸುವಾಗ ನಾವು ಅತ್ಯಂತ ಕಾಳಜಿ ವಹಿಸಬೇಕು ಮತ್ತು ಗಂಭೀರವಾಗಿರಬೇಕು. ಸಮವಸ್ತ್ರದಲ್ಲಿರುವಾಗ ಅನುಚಿತವಾದ ವಿಷಯವನ್ನು ಪ್ರಸಾರ ಮಾಡುವುದರಿಂದ ಪ್ರತಿಷ್ಠೆಗೆ ಕುಂದು ತರುತ್ತದೆ ಎಂದರು.

ಈ ಸಂಬಂಧ ಎಲ್ಲ ನಗರ ಘಟನದ ಮುಖ್ಯಸ್ಥರು, ಪೊಲೀಸ್ ಉಪ ಆಯುಕ್ತರು ಮತ್ತು ಸಹಾಯಕ ಪೊಲೀಸ್ ಕಮಿಷನರ್‌ಗಳಿಗೆ ಸೂಚನೆ ನೀಡಿ, ಯಾವುದೇ ಪೊಲೀಸ್ ಸಿಬ್ಬಂದಿ ಪೊಲೀಸ್ ಸಮವಸ್ತ್ರದಲ್ಲಿರುವಾಗ ಯಾವುದೇ ರೀತಿಯ ವಿಡಿಯೋಗಳು, ರೀಲ್ಸ್ ಅಥವಾ ಫೋಟೋಗಳನ್ನು ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಲ್ಲಿ ಪೋಸ್ಟ್ ಮಾಡದಂತೆ ಎಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಯೂನಿಯನ್ ಬಜೆಟ್ 'ಕಾಪಿ ಕ್ಯಾಟ್ ಬಜೆಟ್': ಮಲ್ಲಿಕಾರ್ಜುನ ಖರ್ಗೆ ಲೇವಾಡಿ