Publish Date: Thu, 28 Oct 2021 (17:15 IST)
Updated Date: Thu, 28 Oct 2021 (17:20 IST)
ಬೆಂಗಳೂರಿನ ತಾಜ್ ವೆಸ್ಟೆಂಡ್ ಹೋಟೆಲ್ ನಲ್ಲಿ ದಕ್ಷಿಣ ರಾಜ್ಯಗಳ ಪ್ರವಾಸೋದ್ಯಮ ಸಚಿವರ ಸಮ್ಮೇಳನ ನಡೆಯುತ್ತಿದೆ. ಎರಡು ದಿನಗಳ ಕಾಲ ನಡೆಯುವ ಈ ಕಾರ್ಯಕ್ರಮದ ವೇದಿಕೆಯ ಬ್ಯಾನರ್ ನಲ್ಲಿ ಕನ್ನಡ ಬಳಸದ ಬಗ್ಗೆ ರಾಜ್ಯ ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ.ಕಾರ್ಯಕ್ರಮ ನಡೆಯುತ್ತಿದ್ದ ವೇದಿಕೆಗೆ ಪ್ರವಾಸೋದ್ಯಮ ಇಲಾಖೆ ಮಹಾ ನಿದೇರ್ಶಕ ಗಂಜಿ ಕಮಲ ವರ್ಧನ್ ರಾವ್ ಅವರನ್ನು ಕರೆಯಿಸಿ ಕೊಂಡ ಸಚಿವರು, ಕೇಂದ್ರ ಪ್ರವಾಸೋದ್ಯಮ ಇಲಾಖೆ ಆಯೋಜಿಸಿರುವ ಕಾರ್ಯಕ್ರಮ ಆದರೂ ಸಹ ವೇದಿಕೆಯಲ್ಲಿ ಕನ್ನಡ ಇಲ್ಲದಿರುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರು.ಕೂಡಲೇ ವೇದಿಕೆಯ ಬ್ಯಾನರ್ ನಲ್ಲಿ ಕನ್ನಡ ಭಾಷೆ ಬಳಸುವಂತೆ ತಾಕೀತು ಮಾಡಿದರು ಎಚ್ಚೆತ್ತ ಅಧಿಕಾರಿಗಳು ಬ್ಯಾನರ್ ನಲ್ಲಿ ಕನ್ನಡ ಬಳಸಿದ್ದಾರೆ.