ಹೌದು, ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ರಾಮಪೂರದ ಬಿಎಸ್‌ಎನ್‌ಎಲ್ ಕಚೇರಿ ಹತ್ತಿರವಿರುವ ೭೭ ವರ್ಷ ವಯಸ್ಸಿನ ವೃದ್ಧೆ ದುಂಡವ್ವ ಕರೋಳಿ ಎಂಬುವಳ ಯಾತನೆ ಹೇಳತೀರದು. ೨೦೦೫ ನೇ ಸಾಲಿನಲ್ಲಿ ದುಂಡವ್ವ ಕಂದಾಯ ಇಲಾಖೆ ಮಾಸಿಕ ೪೦೦ ರೂಪಾಯಿ ವೃದ್ಧಾಪ್ಯ ವೇತನ ಮಂಜೂರು ಮಾಡಿ ಆದೇಶ ನೀಡಿದೆ. ಈಲ್ಲಾ ಖಜಾನೆ ತಯಾರಿಸಿರುವ ವೃದ್ಧಾಪ್ಯ ವೇತನ ಫಲಾನುಭವಿ ಪಟ್ಟಿಯಲ್ಲಿ ಮತ್ತು ಪ್ರತಿ ತಿಂಗಳು ಖಜಾನೆಯಿಂದ ಅಂಚೆ ಕಚೇರಿಗೆ ವಕ ಸದಸ ವೇತನ ಸಂದಾಯವಾಗುತ್ತಿತ್ತು.
ಕಳೆದೊಂದು ವರ್ಷದಿಂದ ಹಣ ಬರುತ್ತಿಲ್ಲ. ಪಡಿತರ ಅಕ್ಕಿಯಂತು ವೃದ್ಧೆಗೆ ಗಗನಕುಸುಮವಾಗಿದೆ. ಕಳೆದ ೧೦ ವರ್ಷಗಳಿಂದ ಹಲವಾರು ಸರ್ಕಾರಿ ಕಚೇರಿ ಅಲೆದು ಸುಸ್ತಾಗಿ ಕೊನೆಗೂ ಪಡಿತರ ಅಕ್ಕಿ ದೊರಕದೆ ಉಪವಾಸದಲ್ಲಿಯೇ ಬದುಕು ಸಾಗಿಸುತ್ತಿದ್ದಾಳೆ. ಸುತ್ತಲಿನ ಕುಟುಂಬಗಳು ಇವಳ ಸಮಸ್ಯೆ ಅರಿತು ದಿನಂಪ್ರತಿ ಊಟ, ಉಪಚಾರ ಮಾಡುತ್ತಿದ್ದರೆ ಒಂದೊಂದು ಹೊತ್ತು ಉಪವಾಸವೇ ಗತಿಯಾಗಿದೆ.
ಬಾಗಿದ ಶರೀರ, ಪತಿ, ಮಕ್ಕಳು ಇಲ್ಲದೆ ಒಬ್ಬಂಟಿಯಾಗಿ ಸುರೇಶ ಹಟ್ಟಿ ಎಂಬುವರಿಗೆ ಸೇರಿದ ಬಾಡಿಗೆ ಮನೆಯಲ್ಲಿ ಕಾಲ ಕಳೆಯುತ್ತಿರುವ ವೃದ್ಧೆ ದುಂಡವ್ವಳಿಂದ ಮನೆ ಬಾಡಿಗೆಯೆಂದು ಒಂದು ಪೈಸೆಯೂ ಹಣವನ್ನು ಸುರೇಶ ಪಡೆದಿಲ್ಲ.
ಇವಳ ನಿತ್ಯ ಗೋಳು, ಸಮಸ್ಯೆ ಕೇಳಿ ಮನೆ ನೀಡಿದ್ದಲ್ಲದೆ ಉಪಚಾರದಲ್ಲಿಯೂ ತೊಡಗಿರುವದು ಮಾನವೀಯತೆಗೆ ಹಿಡಿದ ಕನ್ನಡಿಯಾಗಿದೆ.