ಗಡಿ ಜಿಲ್ಲೆ ಬೆಳಗಾವಿಯಲ್ಲಿ ಸಪ್ತ ನದಿಗಳು ಉಕ್ಕಿ ಹರಿಯುತ್ತಿವೆ. ಮಹಾರಾಷ್ಟ್ರ ಬೆಳಗಾವಿಯಲ್ಲಿ ಮಳೆ ಪ್ರಮಾಣ ತಗ್ಗಿದರೂ, ಪ್ರವಾಹದ ಭೀತಿಯಿಂದ ನದಿ ಪಾತ್ರದ 19 ಸಾವಿರ ಜನರನ್ನ ಸುರಕ್ಷಿತ ಪ್ರ
ದೇಶಕ್ಕೆ ಸ್ಥಳಾಂತರ ಮಾಡಲಾಗಿದೆ.
ಮಳೆಯಿಂದ ಹಾನಿಯಾದ ಪ್ರದೇಶಕ್ಕೆ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪನವರು ಸಚಿವರ ತಂಡದೊಂದಿಗೆ ಭೇಟಿ ನೀಡಿ ಪರಿಶೀಲಿಸಿದರು. ಬೀದಿ ಪಾಲಾದ ಸಂತ್ರಸ್ತರಿಗೆ ಬಿ.ಎಸ್ ವೈ ಆತ್ಮ ಸ್ಥೈರ್ಯ ತುಂಬಿ ಆದಷ್ಟು ಬೇಗ ಪರಿಹಾರ ಕಾರ್ಯ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಸಿ.ಎಂ ರಾಜೀನಾಮೆ ನೀಡುತ್ತಾರೆ ಎಂಬ ಚರ್ಚೆ ಮಧ್ಯೆ ಸಿಎಂ ಬಿ.ಎಸ್.ವೈ ಪರಿಹಾರದ ನೆರವಿಗಾಗಿ ಕೇಂದ್ರ ಕ್ಕೆ ಪತ್ರ ಬರೆಯುತ್ತೇನೆ.. ಸಾಧ್ಯವಾದ್ರೆ ನಾಳೆ ಕಾರವಾರದ ಪ್ರವಾಹ ಪೀಡಿತ ಪ್ರದೇಶಕ್ಕೆ ಭೇಟಿ ನೀಡುವುದಾಗಿ ಸಿಎಂ ಮಾರ್ಮಿಕವಾಗಿ ಹೇಳಿದ್ರು. ನಾಯಕತ್ವ ಬದಲಾವಣೆ ಬಗ್ಗೆ ಕಾದು ನೋಡೋಣ ಎಂಬ ಹೇಳಿಕೆ ಈಗ ಕುತೂಹಲ ಸೃಷ್ಟಿಸಿದೆ.