Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಹೋಂ ಐಸೋಲೇಷನ್ ನಲ್ಲಿದ್ದು, ಕೊರೊನಾ ಸೋಂಕಿನಿಂದ ಗುಣಮುಖರಾದವರಿಗೆ ಯಾವುದೇ ಡಿಜಿಟಲ್ ಸರ್ಟಿಫಿ ಕೇಟ್ ನೀಡಲಾಗುವುದಿಲ್ಲ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ಹೇಳಿಕೆ ನೀಡಿದ್ದಾರೆ. ಈ ಸಂಬಂಧ ಬಿಬಿಎಂಪಿ ಕಚೇರಿ ಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಾಸಿಟಿವ್ ಕಾಣಿಸಿಕೊಂಡವರು ತಮ್ಮ ರಿಪೋರ್ಟ್ ಬಂದ ನಂತರ 7 ದಿನಗಳ ಕಾಲ ಹೋಂ ಐಸೋಲೇಷನ್‍ನಲ್ಲಿ ಇರಬೇಕು.
ಒಂದು ವೇಳೆ 7 ದಿನಗಳ ನಂತರವೂ ರೋಗ ಲಕ್ಷಣ ಇದ್ದರೆ ಮತ್ತಷ್ಟು ದಿನಗಳ ಕಾಲ ಐಸೋಲೇಷನ್‍ನಲ್ಲಿ ಇರಬೇಕಾಗುತ್ತದೆ. 7 ದಿನಗಳ ಒಳಗೆ ಸೋಂಕು ಮಾಯವಾಗಿದ್ದರೆ ಅದು ಆಟೋ ಡಿಸ್ಚಾರ್ಜ್ ಆಗಬಹುದು. ಅದಕ್ಕೆ ಯಾವುದೇ ಸರ್ಟಿಫಿಕೆಟ್‍ನ ಅವಶ್ಯಕತೆ ಇಲ್ಲ ಎಂದು ಸ್ಪಷ್ಟನೆ ನೀಡಿದರು. ಇನ್ನು ಕೆಲವು ಖಾಸಗಿ ಸಂಸ್ಥೆಗಳು ಸೋಂಕಿತರಿಂದ ಡಿಜಿಟಲ್ ಸರ್ಟಿಫಿಕೇಟ್ ಕೇಳುತ್ತಿದ್ದರೆ ಅಂತಹವರಿಗೆ ಹೋಂ ಐಸೋಲೇಷನ್‍ನಲ್ಲಿ ಕಳೆದಿರುವ ಬಗ್ಗೆ ಮಾಹಿತಿ ನೀಡಿದರೆ ಸಾಕು ಎಂದು ಗೌರವ್ ಗುಪ್ತಾ ಮಾಹಿತಿ ನೀಡಿದ್ದಾರೆ.