Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ನಗರದ ಹಲವು ದೇಗುಲಗಳಲ್ಲಿ ಘಂಟಾನಾದಕ್ಕೆ ನಿರ್ಬಂಧ ವಿಧಿಸಿ ನೋಟಿಸ್ ಜಾರಿ ಮಾಡಲಾಗಿದೆ. ದೊಡ್ಡ ಗಣಪತಿ ದೇವಸ್ಥಾನ, ಮಿಂಟೋ ಆಂಜನೇಯ ದೇಗುಲ, ಕಾರಂಜಿ ಆಂಜನೇಯಸ್ವಾಮಿ, ದೊಡ್ಡ ಬಸವಣ್ಣ ದೇವಸ್ಥಾನ, ಮಲ್ಲಿಕಾರ್ಜುನಸ್ವಾಮಿ ಸೇರಿ ಹಲವು ದೇಗುಲಗಳಿಗೆ ಧಾರ್ಮಿಕ ದತ್ತಿ ಇಲಾಖೆಯಿಂದ ನೋಟಿಸ್ ಜಾರಿ ಮಾಡಲಾಗಿದೆ.
ದೇವಸ್ಥಾನದ ಮಹಾ ಮಂಗಳಾರತಿ, ಅಭಿಷೇಕದ ಸಂದರ್ಭದಲ್ಲಿ ನಿಗದಿತ ಡೆಸಿಬಲ್ಗಿಂತ ಹೆಚ್ಚಿನ ಶಬ್ದ ಬಳಕೆ ಆಗುತ್ತಿರುವ ಹಿನ್ನೆಲೆ ನಿಗದಿತ ಡೆಸಿಬಲ್ಗಿಂತ ಕಡಿಮೆ ಶಬ್ದ ಬಳಸುವಂತೆ ದೇವಸ್ಥಾನಗಳಿಗೆ ನೋಟಿಸ್ ನೀಡಲಾಗಿದೆ. ದೇವಸ್ಥಾನದ ಘಂಟೆ, ಡಮರುಗ, ಧ್ವನಿ ವರ್ಧಕ ಬಳಕೆಗೆ ನಿಗದಿತ ಡೆಸಿಬಲ್ಗಿಂತ ಮೀರಬಾರದು. ಘಂಟೆ ಬಾರಿಸುವ ಸಂದರ್ಭದಲ್ಲೂ ನಿಗದಿತ ಡೆಸಿಬಲ್ ಗಿಂತ ಕಡಿಮೆ ಶಬ್ದ ಬಳಕೆ ಆಗಬೇಕು ಎಂದು ತಿಳಿಸಲಾಗಿದೆ.