Webdunia - Bharat's app for daily news and videos

Install App

ತಿಂಗಳಿನಿಂದ ಕ್ಷುಲ್ಲಕ ಕಾರಣಕ್ಕೆ ವಜಾಗೊಂಡ ನಿಮ್ಹಾನ್ಸ್ ಸಿಬ್ಬಂದಿ ಪ್ರೊಟೆಸ್ಟ್

Webdunia
ಬುಧವಾರ, 1 ಸೆಪ್ಟಂಬರ್ 2021 (21:05 IST)
ಬೆಂಗಳೂರು:  ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಮೆಂಟಲ್ ಹೆಲ್ತ್ ಅಂಡ್ ನ್ಯುರೋ ಸೈನ್ಸಸ್ (ನಿಮ್ಹಾನ್ಸ್) ಅಲ್ಲಿ ಹಲವಾರು ವರ್ಷಗಳಿಂದ ಕೆಲಸ ನಿರ್ವಹಿಸುತ್ತಿದ್ದ 19 ಹಾಸ್ಪಿಟಲ್ ಅಸಿಸ್ಟೆಂಟ್ ಗಳನ್ನು ಕ್ಷುಲಕ ಕಾರಣಕ್ಕೆ  ಕಾನೂನು ಬಾಹಿರವಾಗಿ ಕೆಲಸದಿಂದ  ವಜಾಗೊಳಿಸಲಾಗಿದೆ. 19 ಜನ ಕಾರ್ಮಿಕರಲ್ಲಿ 15 ಜನ ಮಹಿಳೆಯರಾಗಿದ್ದು, ಬಹುತೇಕ ಮಂದಿ ದಲಿತ ಸಮುದಾಯಕ್ಕೆ ಸೇರಿದವರಾಗಿದ್ದಾರೆ ಎಂದು ದೂರಿ ಆಸ್ಪತ್ರೆಯ ಆವರಣದಲ್ಲಿ ಪ್ರೊಟೆಸ್ಟ್ ನೆಡೆಸುತ್ತಿದ್ದಾರೆ.
 
 ಹಾಸ್ಪಿಟಲ್ ಅಸಿಸ್ಟೆಂಟ್ ಗಳ ಬೆವರು ಮತ್ತು ಶ್ರಮದಿಂದ ನಿಮ್ಹಾನ್ಸ್ ಆಸ್ಪತ್ರೆಯು ರಾಷ್ಟ್ರ ಮಟ್ಟದಲ್ಲಿ ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ. ಕರ್ನಾಟಕ ಸರ್ಕಾರವು ಕೋವಿಡ್ ನಿಯಂತ್ರಣಕ್ಕಾಗಿ ಜಾರಿಗೊಳಿಸಿದ್ದ ರಾತ್ರಿ ಕರ್ಫ್ಯೂ ನಂತರದಲ್ಲಿ ಯಾರೂ ಸಹ ಪ್ರಯಾಣಿಸುವಂತೆ ಇಲ್ಲ ಎಂದು ಆದೇಶಿಸಿದ್ದರು. ಹೀಗಿರುವಾಗ ನಿಮ್ಹಾನ್ಸ್ ಆಸ್ಪತ್ರೆ  ಕಾರ್ಮಿಕರಿಗೆ ತಿಳಿಸದೆ ಕೆಲಸದ ಪಾಳಿ ಸಮಯದಲ್ಲಿ ಬದಲಾವಣೆಯನ್ನು ತರುತ್ತಾ, ಕಾರ್ಮಿಕರು ರಾತ್ರಿ 9.30 ಗಂಟೆಯ ವರೆಗೂ ಕೆಲಸ ಮಾಡಬೇಕೆಂದು ಹೇಳಿದರು. ಸಹಜವಾಗಿ, ಕಾರ್ಮಿಕರು ಮನೆ ತಲುಪುವುದಕ್ಕೆ ಕಷ್ಟವಾಗುವುದು ಎಂದು ತಮ್ಮ ಕಾಳಜಿಯನ್ನು ವ್ಯಕ್ತಪಡಿಸಿ,ಆಸ್ಪತ್ರೆಯ ಆಡಳಿತ ಮಂಡಳಿಗೆ  ಸಾರಿಗೆ ವ್ಯವಸ್ಥೆಯನ್ನು ಮಾಡಿಕೊಡಲು ಕೇಳಿಕೊಂಡರು. ಈ ಬೇಡಿಕೆಗೆ ನಿಮ್ಹಾನ್ಸ್ ಆಡಳಿತ ವರ್ಗದವರು ಮಹಿಳಾ ಕಾರ್ಮಿಕರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ ಕೆಲಸದಿಂದ ವಜಾಗೊಳಿಸಿದ್ದಾರೆ ಎಂದು ಪ್ರತಿಭಟಿಸುತ್ತಿದ್ದಾರೆ. 
 
ಕಾರ್ಮಿಕರು ಹಲವಾರು ವರ್ಷಗಳಿಂದ ನಿಷ್ಠೆ ಇಂದ ಕೆಲಸ ನಿರ್ವಹಿಸಿಕೊಂಡು ಬಂದಿದ್ದು, ಕೊವಿದ್ -19 ತಡೆಗಟ್ಟಲು ಅತ್ಯುನ್ನತ ಕೆಲಸವನ್ನು ಮುಂಚೂಣಿಯಲ್ಲಿ ನಿಂತು ಕೆಲಸ ಮಾಡಿದ್ದಾರೆ. ವಿರಾಮ ರಹಿತವಾಗಿ ಕೆಲಸ ಮಾಡುತ್ತಾ, ನಿಮ್ಹಾನ್ಸ್ ಸಂಸ್ಥೆಯ ಪ್ರಸಿದ್ಧತೆಯನ್ನು ಹೆಚ್ಚಿಸಿದರು. ತಮ್ಮ ಕಷ್ಟಗಳನ್ನು ಹೇಳಿಕೊಂಡ ಕಾರಣ, ಅವರನ್ನು ಏಕಪಕ್ಷೀಯವಾಗಿ ಕೆಲಸದಿಂದ ವಜಾಗೊಳಿಸಿದರು ಎಂದು ಅಳಲು ತೋಡಿಕೊಳ್ಳುತ್ತಿದ್ದಾರೆ.
 
ರಾಜ್ಯ ಸರ್ಕಾರವು  ಅಧಿಸೂಚನೆಯನ್ನು ಹೊರಡಿಸಿ ಮಹಿಳಾ ಕಾರ್ಮಿಕರು ಸಂಜೆ 7 ಗಂಟೆಯ ನಂತರದ ಪಾಳಿಯಲ್ಲೂ ಕೆಲಸ ಮಾಡಬಹುದೆಂದು ಆದೇಶಿಸಿದ್ದರು. ಆದರೆ ರಾತ್ರಿ ಪಾಳಿಯಲ್ಲಿ ಮಹಿಳಾ ಕಾರ್ಮಿಕರು ಕೆಲಸ ಮಾಡಬೇಕೆಂದರೆ ಮಾಲೀಕರು ಸಾರಿಗೆ ವ್ಯವಸ್ಥೆಯನ್ನು ರೂಪಿಸಬೇಕು ಮತ್ತು ಸಾರಿಗೆಯಲ್ಲಿ ಸಿಸಿಟಿವಿ ಕ್ಯಾಮರಾ ಇರಬೇಕು, ಹಾಗೂ ಇತರೆ ರಕ್ಷಣೆಗಳನ್ನು ಒದಗಿಸಿದರೆ ಮಾತ್ರ ಮಹಿಳಾ ಕಾರ್ಮಿಕರನ್ನು ರಾತ್ರಿ ಪಾಳಿಯಲ್ಲಿ ಕೆಲಸ ಮಾಡಿಸಿಕೊಳ್ಳಬಹುದು ಎಂದು ಆದೇಶದಲ್ಲಿ ಹೇಳಲಾಯಿತು. ಆದರೆ, ನಿಮ್ಹಾನ್ಸ್ ಕಾರ್ಮಿಕರು ಸಾರಿಗೆ ವ್ಯವಸ್ಥೆ ಕೇಳಿದಾಗ ವಿನಾಕಾರಣ ಕೆಲಸದಿಂದ ವಜಾಗೊಳಿಸಲಾಯಿತು ಎಂದು ಆರೋಪಿಸಿಯುತ್ತಿದ್ದಾರೆ.
 
ನಿಮ್ಹಾನ್ಸ್ ಪ್ರಗತಿಪರ ವರ್ಕರ್ಸ್ ಯೂನಿಯನ್ ಎಐಸಿಸಿಟಿಯು ಸಂಯೋಜಿತ ಸಂಘಟನೆಯಾಗಿದ್ದು, ಈ 19 ಜನ ಕೆಲಸದಿಂದ ವಜಾಗೊಂಡ ಕಾರ್ಮಿಕರು ಈ ಸಂಘದ ಸದಸ್ಯರಾಗಿದ್ದರು ಜುಲೈ 7 ರಿಂದ ನಿಮ್ಹಾನ್ಸ್ ಆವರಣದಲ್ಲಿ ಕೆಲಸಕ್ಕೆ ವಾಪಸ್ ತೆಗೆದುಕೊಳ್ಳಬೇಕೆಂದು ಹೋರಾಟದಲ್ಲಿ ಕುಳಿತಿದ್ದಾರೆ. ದಶಕಗಳಿಂದ ಕೆಲಸ ನಿರ್ವಹಿಸಿದ್ದ ಈ ಕಾರ್ಮಿಕರನ್ನು ಒಮ್ಮೆಯೂ ನಿಮ್ಹಾನ್ಸ್ ಅಧಿಕಾರಿಗಳು ಮಾತನಾಡಿಸಲು ಸಹ ಬಂದಿಲ್ಲ ಎಂದು ಪ್ರತಿಭಟನಾಕಾರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
 
ಕೇಂದ್ರ ಸರ್ಕಾರದ ಸಂಸ್ಥೆಯಾದ ನಿಮ್ಹಾನ್ಸ್ ತಮ್ಮ ಕಾರ್ಮಿಕರನ್ನು ಇಷ್ಟು ಕೀಳು ಮಟ್ಟದಲ್ಲಿ ವರ್ತಿಸುತ್ತಿರುವುದು ಅಮಾನವೀಯ ಮತ್ತು ಖಂಡನೀಯವಾದದ್ದು. ಈ ಎಲ್ಲಾ 19 ಜನ ಕಾರ್ಮಿಕರನ್ನು ಪುನಃ ಕೆಲಸಕ್ಕೆ ತೆಗೆದುಕೊಳ್ಳುವ ತನಕ ನಿಮ್ಹಾನ್ಸ್ ಪ್ರಗತಿಪರ ವರ್ಕರ್ಸ್ ಯೂನಿಯನ್ ತನ್ನ ಹೋರಾಟವನ್ನು  ಮುಂದುವರೆಸುತ್ತೇವೆ ಎಂದು ಪದಾಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ. 
 
ಸಿಬ್ಬಂದಿಗಳಿಗೂ ನಮಗೂ ಸಂಬಂಧವಿಲ್ಲ: ನಿಮ್ಹಾನ್ಸ್ ಸ್ಪಷ್ಟನೆ:
 
ಪ್ರತಿಭಟಿಸುತ್ತಿರುವ ನೌಕರರು ಹೊರ ಗುತ್ತಿಗೆ ಆಧಾರದಲ್ಲಿ ಬೇರೆ ಸಂಸ್ಥೆಯಿಂದ ಆಸ್ಪತ್ರೆಗೆ ನಿಯೋಜನೆಗೊಂಡಿದ್ದಾರೆ. ಪ್ರಿಭಟಿಸುತ್ತಿರುವ ಸಿಬ್ಬಂದಿಗೂ ಆಸ್ಪತೆಗೂ ಯಾವುದೇ ಸಂಬಂಧವಿಲ್ಲ. ಕೆಲಸದ ಸಮಯ , ಸಾರಿಗೆ ವ್ಯವಸ್ಥೆ ಹೊರಗುತ್ತಿಗೆ ಸಂಸ್ಥೆಯ ಜವಾಬ್ದರಿಯಾಗಿದ್ದು ತಮಗೂ ಈ ಗೊಂದಲಗಳಿಗೂ ಸಂಬಂಧವಿಲ್ಲವೆಂದು ಆಡಳಿತ ಮಂಡಳಿ  ಸ್ಪಷ್ಟಪಡಿಸಿದೆ.
protest

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಕೆಪಿಸಿಸಿ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿದ್ದ ರಾಜಣ್ಣ ಚುನಾವಣಾ ರಾಜಕಾರಣಕ್ಕೆ ಗುಡ್‌ಬೈ, ಕಾರಣವೇನು ಗೊತ್ತಾ

ಮತ್ತೆ ನಾಲಗೆ ಹರಿಬಿಟ್ಟ ಈಶ್ವರಪ್ಪ: ಆಪರೇಷನ್ ಸಿಂಧೂರ್‌ ಟೀಕಿಸುವವರನ್ನು ಗುಂಡಿಕ್ಕಿ ಎಂದ ಮಾಜಿ ಡಿಸಿಎಂ

Arecanut price today: ಅಡಿಕೆ ಬೆಲೆ ಇಂದೂ ಯಥಾಸ್ಥಿತಿಯಲ್ಲಿ, ಇಂದಿನ ಬೆಲೆ ವಿವರ ಇಲ್ಲಿದೆ

Gold Price today: ಚಿನ್ನದ ದರ ಇಂದು ಎಷ್ಟಾಗಿದೆ ನೋಡಿ

Rahul Gandhi: ರಾಹುಲ್ ಗಾಂಧಿ ಯಾವತ್ತಿದ್ರೂ ಪಾಕಿಸ್ತಾನ ಪರವಾಗಿಯೇ ಇರ್ತಾರೆ: ಬಿಜೆಪಿ ತಿರುಗೇಟು

ಮುಂದಿನ ಸುದ್ದಿ
Show comments