Publish Date: Sat, 30 Sep 2017 (15:17 IST)
Updated Date: Sat, 30 Sep 2017 (15:26 IST)
ಮೈಸೂರು: ಅರಮನೆಯ ಬಲರಾಮ ದ್ವಾರದ ಬಳಿ ಶುಭ ಮಕರ ಲಗ್ನದಲ್ಲಿ ನಂದಿಧ್ವಜಕ್ಕೆ ಸಿಎಂ ಸಿದ್ದರಾಮಯ್ಯ ಪೂಜೆ ಸಲ್ಲಿಸಿದರು. ಈ ಮೂಲಕ ವೈಭವದ ಜಂಬೂಸವಾರಿ ಮೆರವಣಿಗೆಗೆ ಚಾಲನೆ ನೀಡಿದರು.
ನಂದಿ ಧ್ವಜಕ್ಕೆ ಪೂಜೆ ಸಲ್ಲಿಸಿದ ಬಳಿಕ ಮಾತನಾಡಿದ ಸಿಎಂ, ಈ ಬಾರಿ ಉತ್ತಮ ಮಳೆಯಾಗಿದೆ. ಕೆರೆಗಳು ತುಂಬಿದ್ದು, ಜಲಾಶಯಗಳು ಭರ್ತಿಯಾಗಿವೆ. ಸದ್ಯಕ್ಕೆ ರಾಜ್ಯದಲ್ಲಿ ನೀರಿನ ಸಮಸ್ಯೆ ಇಲ್ಲ. ನಾವು ಈಗಾಗಲೇ ಉತ್ತಮ ಆಡಳಿತ ನೀಡಿದ್ದೇವೆ. ಮುಂದಿನ ವರ್ಷವೂ ನಾನೇ ದಸರಾಗೆ ಚಾಲನೆ ನೀಡ್ತಿನಿ. ಇದರಲ್ಲಿ ಯಾವುದೇ ಅನುಮಾನ ಬೇಡ
ಎಂದರು.
ನನ್ನ ನಾಯಕತ್ವದಲ್ಲೇ ಚುನಾವಣೆ ನಡೆಯಲಿದ್ದು, ನಾವೇ ಅಧಿಕಾರಕ್ಕೆ ಬರುತ್ತೇನೆ. ಮೈಸೂರಿನಲ್ಲಿ ಇರುವುದು ನಾನೇ. ನಾನೇ ಮುಂದಿನ ಬಾರಿಯೂ ಪೂಜೆ ಮಾಡುತ್ತೇನೆ ಎಂದರು.