ವಾರ್ಡ್ ಸಮಿತಿಗಳಲ್ಲಿ ಯಾವುದೇ ರಾಜಕೀಯ ಪಕ್ಷದ ಕಾರ್ಯಕರ್ತ,ಪದಾಧಿಕಾರಿಗಳಿಗೆ ಅವಕಾಶವಿಲ್ಲ. ಪಕ್ಷದ ಪರ ಒಲವಿದ್ದವರು ಕೂಡ ಸದಸ್ಯರಾಗುವಂತಿಲ್ಲ. ಆದರೆ
ಮಂಗಳೂರು ಮಹಾನಗರ ಪಾಲಿಕೆಯ ವಾರ್ಡ್ ಸಮಿತಿಗಳಲ್ಲಿ ಬಿಜೆಪಿ ಸದಸ್ಯರಿಗೆ ಮಣೆ ಹಾಕಲಾಗಿದೆ ಎಂದು ಮಾಜಿ ಶಾಸಕ ಜೆ.ಆರ್.ಲೋಬೋ ಆರೋಪಿಸಿದ್ದಾರೆ. ಮಂಗಳೂರಿನ
ಮಲ್ಲಿಕಟ್ಟೆಯ ಕಾಂಗ್ರೆಸ್ ಭವನದಲ್ಲಿ ನಡೆದ ಸುದ್ದಿಗೋಷ್ಠಿ ನಡೆಸಿದ ಅವರು, 60 ವಾರ್ಡ್‌ಗಳ ಸಮಿತಿಗೆ ಸುಮಾರು 1,278 ಮಂದಿ ಅರ್ಜಿ ಸಲ್ಲಿಸಿದ್ದರು. ಆ ಪೈಕಿ 600 ಮಂದಿಯ ಅರ್ಜಿಗಳನ್ನು ತಿರಸ್ಕರಿಸಲಾಗಿದೆ. ಆದರೆ ಆಯ್ಕೆ ಮಾಡಲಾದ ಸದಸ್ಯರ ಪೈಕಿ ಶೇ.90ರಷ್ಟು ಮಂದಿ ಬಿಜೆಪಿ ಸದಸ್ಯರಾಗಿದ್ದಾರೆ. ಇದು ನಿಯಮಗಳಿಗೆ ವಿರುದ್ಧವಾಗಿದ್ದು, ತಕ್ಷಣ ಈ ಪಟ್ಟಿಯನ್ನು ರದ್ದುಪಡಿಸಿಕೊಂಡು ರಾಜಕೀಯೇತರ ವ್ಯಕ್ತಿಗಳನ್ನು ಒಳಗೊಂಡ ವಾರ್ಡ್ ಸಮಿತಿಯನ್ನು ರಚಿಸಬೇಕು ಎಂದು ಒತ್ತಾಯಿಸಿದರು