Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಆಸ್ತಿ ನೋಂದಣಿಗೆ ಇನ್ನು ಈ ದಾಖಲೆಗಳು ಕಡ್ಡಾಯ: ಬದಲಾದ ನಿಯಮ ಹೀಗಿದೆ

Krishna Byre Gowda

Krishnaveni K

ಬೆಂಗಳೂರು , ಮಂಗಳವಾರ, 27 ಆಗಸ್ಟ್ 2024 (09:00 IST)
Photo Credit: Facebook
ಬೆಂಗಳೂರು: ಆಸ್ತಿ ನೋಂದಣಿ ಮಾಡಿಕೊಳ್ಳುವವರಿಗೆ ರಾಜ್ಯ ಸರ್ಕಾರ ಹೊಸ ನಿಯಮವನ್ನು ಕಡ್ಡಾಯಗೊಳಿಸಿದ್ದು, ಇನ್ನು ಮುಂದೆ ಈ ಕೆಲವು ದಾಖಲೆಗಳನ್ನು ಸಲ್ಲಿಸಲೇಬೇಕಾಗುತ್ತದೆ. ಬದಲಾದ ನಿಯಮದ ಬಗ್ಗೆ ಇಲ್ಲಿದೆ ಡೀಟೈಲ್ಸ್.

ಇತ್ತೀಚೆಗಿನ ದಿನಗಳಲ್ಲಿ ಯಾರದ್ದೋ ಆಸ್ತಿಯನ್ನು ತನ್ನ ಆಸ್ತಿಯೆಂದು ವಂಚಿಸುವುದು, ನಕಲಿ ದಾಖಲೆ ನೀಡಿ ಆಸ್ತಿ ಕಬಳಿಸುವುದು ಇತ್ಯಾದಿ ವಂಚನೆಗಳ ಬಗ್ಗೆ ದೂರುಗಳು ಕೇಳಿಬರುತ್ತಲೇ ಇವೆ. ಈ ಹಿನ್ನಲೆಯಲ್ಲಿ ಕಂದಾಯ ಇಲಾಖೆ ಆಸ್ತಿ ನೋಂದಣಿ ನಿಯಮಾವಳಿಗೆ ಕೆಲವು ತಿದ್ದುಪಡಿಗಳನ್ನು ತಂದಿದೆ.

ಈ ಬಗ್ಗೆ ಕಂದಾಯ ಸಚಿವ ಕೃಷ್ಣಭೈರೇಗೌಡ ಮಾಹಿತಿ ನೀಡಿದ್ದಾರೆ. ಇಂದಿನಿಂದ ಎಲ್ಲಾ ಆಸ್ತಿ ವಾರಸುದಾರರು ಉಪನೋಂದಣಿ ಕಚೇರಿಯಲ್ಲಿ ತಮ್ಮ ಪಾಸ್ ಪೋರ್ಟ್, ಆಧಾರ್ ಕಾರ್ಡ್ ಅಥವಾ ಪ್ಯಾನ್ ಕಾರ್ಡ್ ಈ ಮೂರು ದಾಖಲೆಗಳಲ್ಲಿ ಒಂದನ್ನು ಕಡ್ಡಾಯವಾಗಿ ಸಲ್ಲಿಸಬೇಕಾಗುತ್ತದೆ.

ಇನ್ನು ಆಸ್ತಿ ನೋಂದಣಿಗೆ ಸೆಪ್ಟೆಂಬರ್ 2 ರಿಂದ ಅನ್ವಯವಾಗುವಂತೆ ಆಯಾ ಜಿಲ್ಲೆಯ ಯಾವುದೇ ಉಪನೋಂದಣಿ ಕಚೇರಿಗೆ ತೆರಳಿ ಆಸ್ತಿ ನೋಂದಣಿ ಮಾಡಿಸಿಕೊಳ್ಳಬಹುದಾಗಿದೆ. ಜನಜಂಗುಳಿ ತಡೆಗಟ್ಟುವ ನಿಟ್ಟಿನಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಸಚಿವ ಕೃಷ್ಣಭೈರೇಗೌಡ ಹೇಳಿದ್ದಾರೆ.

ಈ ಎರಡು ಬದಲಾವಣೆಗಳನ್ನು ಜನರ ಅನುಕೂಲ ಮತ್ತು ಹಿತದೃಷ್ಟಿಯಿಂದಲೇ ಕೈಗೊಳ್ಳಲಾಗಿದೆ. ಜನ ತಾವು ಖರೀದಿಸಿದ ಆಸ್ತಿಯನ್ನು ಸುರಕ್ಷಿತವಾಗಿಟ್ಟುಕೊಳ್ಳುವುದು ಅಷ್ಟೇ ಮುಖ್ಯ. ಹೀಗಾಗಿ ವಂಚನೆ ತಡೆಯಲು ಈ ಎರಡು ಕಡ್ಡಾಯ ನಿಯಮಗಳನ್ನು ಜಾರಿಗೆ ತರಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಪೂಜೆ ಮಾಡಿದ್ದು ನಿಮಗಾ, ಸಿದ್ದರಾಮಯ್ಯಗಾಗಿಯಾ: ಡಿಕೆ ಶಿವಕುಮಾರ್ ಕಾಲೆಳೆದ ನೆಟ್ಟಿಗರು