Publish Date: Tue, 05 Mar 2019 (19:15 IST)
Updated Date: Tue, 05 Mar 2019 (19:17 IST)
ರಾಜ್ಯದ ರಾಜಧಾನಿಯಿಂದ ರಾಷ್ಟ್ರದ ರಾಜಧಾನಿಯವರೆಗೆ ನೂತನ ರೈಲು ಸಂಚಾರ ಸೌಲಭ್ಯ ಕಲ್ಪಿಸಿರುವುದು ಪ್ರಯಾಣಿಕರ ಸಂತಸಕ್ಕೆ ಕಾರಣವಾಗಿದೆ.
ನವದೆಹಲಿಗೆ ನೂತನ ರೈಲು ಸೌಲಭ್ಯ ಕಲ್ಪಿಸಲಾಗಿದೆ. ಯಶವಂತಪುರ ದಿಂದ ಚಿಕ್ಕಬಳ್ಳಾಪುರ ಕೋಲಾರ ಮಾರ್ಗದಲ್ಲಿ ನವದೆಹಲಿಗೆ ರೈಲು ಸಂಚರಿಸಲಿದೆ. ವಾರದಲ್ಲಿ ಎರೆಡು ದಿನ ಸಂಚರಿಸಲಿರುವ ರೈಲು ಇಂದು ಚಿಕ್ಕಬಳ್ಳಾಪುರಗೆ ಆಗಮಿಸಿದ ಮೊದಲ ಎಕ್ಸ್‌ಪ್ರೆಸ್ ರೈಲನ್ನು ಕಂಡು ರೈಲು ಪ್ರಯಾಣಿಕರು ಸಂತಸ ವ್ಯಕ್ತಪಡಿಸಿದರು. ಸಾವಿರಾರು ನಾಗರಿಕರು ರೈಲಿಗೆ ಸ್ವಾಗತ ಕೋರಿದರು.
ಮೊದಲ ಪ್ರಯಾಣಕ್ಕೆ ಹಸಿರು ನಿಶಾನೆ ತೋರಿದ ಸಂಸದ ವೀರಪ್ಪ ಮೊಯ್ಲಿ ಹಾಗೂ ಶಾಸಕ ಡಾ.ಕೆ.ಸುಧಾಕರ್ ಶುಭ ಕೋರಿದರು. ಮೊದಲದಿನದ ಸಂಚಾರವನ್ನು ಕಂಡು ಸಂತಸ ವ್ಯಕ್ತಪಡಿಸಿದರು ನಾಗರಿಕರು.
Jagadeesh
Publish Date: Tue, 05 Mar 2019 (19:15 IST)
Updated Date: Tue, 05 Mar 2019 (19:17 IST)