ಆಷಾಢ ಮಾಸದ ಅಂಗವಾಗಿ ಮಂಡ್ಯ ಜಿಲ್ಲೆಯ ಪಾಂಡುಪುರ ತಾಲ್ಲೂಕಿನ ದೊಡ್ಡಬ್ಯಾಡರಹಳ್ಳಿ ಗ್ರಾಮದಲ್ಲಿ ನೂತನ ವಧು ವರರಿಗೆ ಗಾಳಿ ಪಟ ಹಾರಾಟ ಸ್ಪರ್ಧೆ ನಡೆಯಿತು.
ಆಷಾಢ ಮಾಸದಲ್ಲಿ ಹೊಸದಾಗಿ ಮದುವೆಯಾದ ಹೆಣ್ಣು ಮಕ್ಕಳು ತವರು ಮನೆಗೆ ಹೋಗೋದು ವಾಡಿಕೆ. ಅದ್ರಂತೆ ಮಂಡ್ಯ ಜಿಲ್ಲೆಯ ಪಾಂಡುಪುರ ತಾಲ್ಲೂಕಿನ ಸುತ್ತಮುತ್ತಲ ಗ್ರಾಮದ ನೂತನ ವಧು-ವರರು ದೊಡ್ಡ ಬ್ಯಾಡರಹಳ್ಳಿಯ ಬ್ರಹ್ಮಲಿಂಗೇಶ್ವರ ದೇವಾಲಯಕ್ಕೆ ಬಂದು ಪೂಜೆ ಸಲ್ಲಿಸಿ, ಗಾಳಿ ಪಟ ಹಾರಿಸ್ತಾರೆ.
ಇದಕ್ಕೆ ನೂರು ವರ್ಷದ ಇತಿಹಾಸವಿದ್ದು, ಆಷಾಢ ಮಾಸಕ್ಕೆ ಅತ್ತೆಯ ಮನೆಗೆ ಬರುವ ಅಳಿಯ, ಪತ್ನಿಯ ಜೊತೆ ಬ್ರಹ್ಮಲಿಂಗೇಶ್ವರನ ಸನ್ನಿಧಿಗೆ ಹೋಗಿ ದೇವರ ದರ್ಶನ ಪಡೆದುಕೊಳ್ಳುತ್ತಾನೆ. ಬಳಿಕ ಗಾಳಿ ಪಟ ಹಾರಿಸಿ ಬರಬೇಕೆಂಬ ವಾಡಿಕೆ ಇಲ್ಲಿ ನಡೆದುಕೊಂಡು ಬಂದಿದೆ. ಹೀಗಾಗಿ ನೂತನ ವಧು – ವರರು ಗಾಳಿ ಪಟ ಹಾರಿಸಿ ಸಂಭ್ರಮಿಸಿದರು.