ನಾಡಹಬ್ಬ ನವರಾತ್ರಿ ಉತ್ಸವದ ಅಂಗವಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಗಂಡು ಮೆಟ್ಟಿನ ನೆಲದಲ್ಲಿ ನಡೆಯುತ್ತಿವೆ.
ಸೆ.29 ರಿಂದ ಅ. 08 ರವರೆಗೆ ಹುಬ್ಬಳ್ಳಿಯ ದಾಜಿಬಾನಪೇಟೆಯ ಸೀತಾಬಾಯಿ ಕುಬೇರಸಾ ಹಬೀಬ ಕಲ್ಯಾಣ ಮಂಟಪದಲ್ಲಿ ಕಾರ್ಯಕ್ರಮಗಳನ್ನು ಮಾಡಲಾಗುವುದು ಅಂತಾ ಸಮಿತಿಯ ಚೇರ್ಮನ್ ವಾಯ್.ಡಿ.ಮಧೂರಕರ ಹೇಳಿದ್ದಾರೆ.
ಸೆ. 29 ರಂದು ಸಂಜೆ 5.30 ಕ್ಕೆ ಎಸ್.ಎಸ್.ಕೆ ಕೇಂದ್ರ ಪಂಚ ಸಮಿತಿಯ ಮುಖ್ಯ ಧರ್ಮದರ್ಶಿಗಳಾದ ನೀಲಕಂಠಸಾ ಜಡಿ ಉತ್ಸವಕ್ಕೆ ಚಾಲನೆ ನೀಡಲಿದ್ದಾರೆ. ನವರಾತ್ರಿ ಹಿನ್ನಲೆಯಲ್ಲಿ ಪ್ರತಿದಿನ ಬೆಳ್ಳಗೆ 6 ಗಂಟೆಗೆ ಸುಪ್ರಭಾತ. ಕುಂಕುಮಾರ್ಚನೆ, ಮಹಿಳೆಯರಿಂದ ದೇವಿಸ್ತುತಿ ನಡೆಯಲಿದೆ. ಅ. 04 ರಂದು ಸಂಜೆ ಚಂಡಿ ಹೋಮ ನಡೆಯಲಿದ್ದು, ಸಂಜೆ ಹನುಮಂತಸಾ ವಾಯ್ ಭರಾಡೆ ನೇತೃತ್ವದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ.
ಎಸ್ಎಸ್ ಕೆ ಸಮಾಜದ ಪುರೋಹಿತ ವರ್ಗದಿಂದ ಮಂತ್ರಪಠಣ ನಡೆಯಲಿದೆ. ಸೆ.7 ರಂದು ಸಂಜೆ 4 ಕ್ಕೆ ಮಹಾಪೂಜೆ ಹಾಗೂ ಮಂಗಳಾರತಿ, ಎಸ್ ಎಸ್ ಕೆ ಹಿರಿಯ ನಾಗರಿಕ ವೇದಿಕೆಯಿಂದ ವಿಚಾರ ಸಂಕೀರ್ಣ ಹಾಗೂ ಕಾರ್ಯಕ್ರಮಗಳು, ಶ್ರೀ ರುಕ್ಮಣಿ ವಲ್ಲಭರಾಜ ಗೋಸ್ವಾಮಿ ಪ್ರವಚನ ನಡೆಯಲಿದೆ. ಸೆ. 8 ರಂದು ವಿಜಯದಶಮಿ ದಿನ ಕುಂಕುಮಾರ್ಚನೆ, ತುಳಸಿ ಅರ್ಚನೆ, ಮಂಗಳಾರತಿ, ಘಟಸ್ಥಾಪನಾ ಮಹಿಳಾ ಮಂಡಳದಿಂದ ದೇವಿಸ್ತುತಿ ದುರ್ಗಾ ಸ್ತೋತ್ರ ನಡೆಯಲಿದೆ ಎಂದ್ರು.