ನರೇಂದ್ರ ಮೋದಿ ಹುಟ್ಟುಹಬ್ಬದ ಪ್ರಯುಕ್ತ ನಿನ್ನೆ ದೇಶದಲ್ಲಿ ದಾಖಲೆ ಮಟ್ಟದಲ್ಲಿ ಲಸಿಕೆ ಹಂಚಿಕೆ ಮಾಡಲಾಗಿದೆ ಅಂತಾ ಸುಧಾಕರ್ ತಿಳಿಸಿದ್ರು. ಇಂದು ವಿಧಾನಸೌಧದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, 10 ಗಂಟೆಗಳ ಅವಧಿಯಲ್ಲಿ 2 ಕೋಟಿ 50 ಲಕ್ಷ ಲಸಿಕೆ ನೀಡಲಾಗಿದೆ. ಕರ್ನಾಟಕದಲ್ಲಿ 30 ಲಕ್ಷ ಗುರಿಯನ್ನು ನೀಡಲಾಗಿತ್ತು. 31 ಲಕ್ಷಕ್ಕೂ ಹೆಚ್ಚು ಲಸಿಕೆ ಕೊಡಲಾಗಿದೆ. 14 ಜಿಲ್ಲೆಗಳಲ್ಲಿ ಕೊಟ್ಟ ಟಾರ್ಗೆಟ್ ಗೂ ಹೆಚ್ಚು ಮಾಡಲಾಗಿದೆ. ಅತೀ ಹೆಚ್ಚು ಲಸಿಕೆ ಕೊಟ್ಟ ಜಿಲ್ಲೆ ಬೆಂಗಳೂರು 5 ಲಕ್ಷದಷ್ಟು ಕೊಡಲಾಗಿದೆ. ಇಡೀ ದೇಶದಲ್ಲಿ ಎರಡನೇ ಜಿಲ್ಲೆ ಬೆಳಗಾವಿ ಹಾಗೂ ಮೂರನೇ ಜಿಲ್ಲೆ ಬಿಹಾರದ ಒಂದು ಜಿಲ್ಲೆ. ಇದರಲ್ಲಿ 16.96ಲಕ್ಷ ಡೋಸ್ ಮಹಿಳೆಯರಿಗೆ ನೀಡಲಾಗಿದೆ. 14.53 ಪುರುಷರು ಡೋಸ್ ತೆಗದುಕೊಂಡಿದ್ದಾರೆ. 5 ಕೋಟಿ ಲಸಿಕೆಯನ್ನು ರಾಜ್ಯದಲ್ಲಿ ನೀಡಲಾಗಿದೆ. ಕಲಬುರ್ಗಿ, ಕೊಪ್ಪಳ, ಉಡುಪಿ, ರಾಯಚೂರಿನಲ್ಲಿ ಕಡಿಮೆ ಲಸಿಕೆ ಆಗಿದೆ ಎಂದರು.