ನವದೆಹಲಿ-ಬಿಜೆಪಿಗೆ ಪಂಚರಾಜ್ಯಗಳ ಸೆಮಿಫೈನಲ್ ಗೆದ್ದ ಬಳಿಕ ಈ ಬಾರಿಯ ೨೦೨೪ರ ಫೈನಲ್ ಗೆಲ್ಲೋದು ಬಹುತೇಕ ಪಕ್ಕಾ ಅನ್ನುವ ಪ್ರಚಂಡ ಆತ್ಮವಿಶ್ವಾಸ ಬಂದಿದೆ.. ಮಧ್ಯಪ್ರದೇಶ, ರಾಜಸ್ಥಾನ, ಛತ್ತಿಸ್‌ಘಡದಲ್ಲಿ ಕಮಲ ಅರಳಿದ ಬಳಿಕ ದೇಶದಲ್ಲಿ ನಮೋ ಅಲೆ ಕಡಿಮೆ ಆಗಿಲ್ಲ ಅನ್ನೋದು ಕನ್ಫರ್ಮ್ ಆಗಿ ಬಿಟ್ಟಿದೆ.ಕಾಂಗ್ರೆಸ್ ಪಂಚರಾಜ್ಯಗಳಲ್ಲಿ ಮಕಾಡೆ ಮಲಗಿದ್ದೆ ಮೋದಿಯ ಆತ್ಮವಿಶ್ವಾಸ ಇನ್ನಷ್ಟು ಹೆಚ್ಚಾಗಿದೆ. ಯಾವುದೇ ಕ್ಷಣದಲ್ಲಿ ಎಲೆಕ್ಷನ್ ನಡೆದರೂ ಮತ್ತೇ ಎನ್‌ಡಿಎಗೆ ಅಧಿಕಾರ ಸಿಗಲಿದೆ ಅಂತ ಸ್ವತಃ ಬಿಜೆಪಿಯ ನಾಯಕರಿಗೆ ಗೊತ್ತಾಗಿ ಬಿಟ್ಟಿದೆ.
ಪಂಚರಾಜ್ಯಗಳಲ್ಲಿ ಮೂರು ರಾಜ್ಯಗಳನ್ನು ಗೆದ್ದ ಬಿಜೆಪಿಗೆ ಮತ್ತೆ ಶಕ್ತಿಕೇಂದ್ರದಲ್ಲಿ ಪವರ್ ಸಿಗುತ್ತೆ ಅಂತ ಅನ್ನಿಸಿದರೂ, ಮೋದಿ ಮತ್ತು ಅಮಿತ್ ಶಾಗೆ ಅದೊಂದು ಕೊರಗಂತೂ ಇದ್ದೇ ಇದೆ. ಮೋದಿ ಮತ್ತು ಅಮಿತ್ ಶಾಗೆ ಪದೇ ಪದೇ ಬೇಜಾರಾಗ್ತಾ ಇರೋದು ದಕ್ಷಿಣ ಸೋಲೇ ಹೊರತು ಮತ್ತೇನಲ್ಲ. ಉತ್ತರದಲ್ಲಿ ಮೋಡಿ ಮಾಡಿದ ಬಿಜೆಪಿಗೆ ತೆಲಂಗಾಣದಲ್ಲಿ ಸೋತಿದ್ದು ಅಲ್ಲಿ ಕಾಂಗ್ರೆಸ್ ಅಧಿಕಾರವನ್ನು ಹಿಡಿದಿದ್ದು ಅಕ್ಷರಶಃ ಹಸಿ ಮೆಣಸು ರುಬ್ಬಿ ಹೊಟ್ಟೆಯಲ್ಲಿ ಇಟ್ಟುಕೊಂಡಾ ಹಾಗೆ ಅನ್ನಿಸಿದೆ.
ಆದರೂ ಇದೀಗ ಪಂಚರಾಜ್ಯಗಳ ಎಲೆಕ್ಷನ್ ಬಳಿಕ ನಮೋ ತಮ್ಮ ವಿರೋಧಿಗಳ ಕೂಟಕ್ಕೆ ಪವರ್ ಸ್ಟೊçÃಕ್ ಕೊಡಲು ಸಿದ್ದವಾಗ್ತಾ ಇದ್ದಾರೆ.. ಒಂದು ಕಡೆ ಕರುನಾಡಿನ ಅಸೆಂಬ್ಲಿ ಸೋಲು, ಇನ್ನೊಂದು ಕಡೆ ಹಿಮಾಚಲದಲ್ಲಿ ಕೈ ಪಾರುಪತ್ಯ, ಪಂಚರಾಜ್ಯಗಳ ಅಖಾಡದಲ್ಲಿ ತೆಲಂಗಾಣದಲ್ಲಿ ಕೆಸಿಆರ್ ಪಾರ್ಟಿಯನ್ನು ಮೀರಿ ಕಾಂಗ್ರೆಸ್ ಗೆದ್ದದ್ದು ಬಿಜೆಪಿಯ ಕೇಂದ್ರದ ವರಿಷ್ಠರ ನಿದ್ದೆಯನ್ನು ಕೆಡಿಸಿದೆ.
ಒಂದAತೂ ಸತ್ಯ ಉತ್ತರಧ್ರುವದಿಂ ದಕ್ಷಿಣಧ್ರುವಕ್ಕೂ ಅನ್ನುವ ಬಿಜೆಪಿಯ ಯಾತ್ರೆ ಸಿದ್ದವಾಗ್ತಾ ಇದೆ. ಉತ್ತರವಂತೂ ಕೈ ತಪ್ಪಿ ಹೋಗಲ್ಲ ಅನ್ನೋದು ಆಲ್‌ಮೊಸ್ಟ್ ಕನ್ಪರ್ಮ್ ಆಗಿದೆ. ಅದರಲ್ಲೂ ಇಂಡಿಯಾ ಕೂಟದ ಮೈನ್ ಫಿಲ್ಲರ್ ಆಗಿದ್ದ ನಿತೀಶ್ ಅದ್ಯಾವಾಗ ಎನ್‌ಡಿಎ ಸಖ್ಯ ಬೆಳೆಸಿದ್ರೋ ಅಲ್ಲೇ ಅರ್ಧ ಬಿಜೆಪಿ ಗೆದ್ದಾಗಿದೆ. ಇನ್ನೂ ದೀದಿ ನಡೆ ಏನೇನು ಅನ್ನೋದು ಅಸ್ಪಷ್ಟವಾಗಿದೆ.
ಇದೀಗ ಬಿಜೆಪಿ ನೇತೃತ್ವದ ಎನ್‌ಡಿಎ ೪೦೦ ಸೀಟ್ ಫಿಕ್ಸ್ ಅಂತ ಫೋಷಣೆ ಮಾಡಿ ತನ್ನ ಅಭಿಯಾನವನ್ನು ಆರಂಭಿಸಿದೆ. ಇದಕ್ಕಾಗಿ ದಕ್ಷಿಣದ ರಾಜ್ಯಗಳನ್ನು ಟಾರ್ಗೆಟ್ ಮಾಡ್ತಿದೆ. ಇಲ್ಲಿ ಹೆಚ್ಚು ಸ್ಥಾನಗಳನ್ನು ಗೆದ್ದಿದ್ದೇ ಆದಲ್ಲಿ ನಮೋ ಲೋಕಸಭೆಯಲ್ಲಿ ಆಡಿದ ಮಾತಿಗೆ ಒಂದು ಗತ್ತು ಅಂತೂ ಬಂದೇ ಬಿಡುತ್ತೆ.ಈ ಬಾರಿ ದೇಶದಲ್ಲಿ ಮತ್ತೇ ನಮೋ ಅಲೆ ಇದೆ ಅನ್ನೋದು ಪಂಚರಾಜ್ಯಗಳ ಎಲೆಕ್ಷನ್ ಅಲ್ಲೇ ಬಹುತೇಕ ಕನ್ಪರ್ಮ್ ಆಗಿದೆ.. ಆದರೂ ಮೋದಿಯ ಟಾರ್ಗೆಟ್ ೪೦೦ ರೀಚ್ ಆಗಬೇಕಾದರೆ ದಕ್ಷಿಣದಲ್ಲಿ ಮೋಡಿ ಮಾಡಲೇಬೇಕಿದೆ ಮೋದಿ ನೇತೃತ್ವದ ಎನ್‌ಡಿಎ ಮಹಾ ಮೈತ್ರಿ ಕೂಟ.
೪೦೦ ಹೊಡೆಯಲೇಬೇಕು ಅಂದ್ರೆ ದಕ್ಷಿಣ ಭಾರತದಲ್ಲಿ ಬಿಜೆಪಿಗೆ ಹೊಸ ನೆಲೆ ಗಟ್ಟಿಗೊಳ್ಳಬೇಕಿದೆ. ಕಳೆದ ಬಾರಿ ಕರುನಾಡಿನಲ್ಲಿ ೨೫ ಸ್ಥಾನ ಗೆದ್ದ ಬಿಜೆಪಿಗೆ, ಈ ಕಡೆಗೆ ತೆಲಂಗಾಣ, ತಮಿಳುನಾಡಿನಲ್ಲಿ ಪಾರುಪತ್ಯ ಸಾಧಿಸೋದೇ ಕಷ್ಟವಾಗಿತ್ತು. ಆದ್ರೆ ಈ ಬಾರಿ ತಮಿಳುನಾಡು, ತೆಲಂಗಾಣದಲ್ಲೂ ಹೊಸ ಹೊಸ ಗೇಮ್‌ಪ್ಲಾö್ಯನ್‌ಗಳನ್ನು ಬಿಜೆಪಿ ಹೂಡ್ತಿದೆ.ಈ ಬಾರಿ ಬಿಜೆಪಿಯ ಸಂಪೂರ್ಣ ಗಮನವು ದಕ್ಷಿಣ ರಾಜ್ಯಗಳ ಕಡೆಗೆ ನೆಟ್ಟಿದೆ. ಇತ್ತಾ ಬಿಜೆಪಿಗೆ ಯಾರು ಹೆಚ್ಚು ಆಪ್ತರು ಆಗಬಹುದು ಅನ್ನೋದಕ್ಕೆ ಸೌತ್ ಸ್ಟೇಟ್ ಲೀಡರ್‌ಗಳ ಮಧ್ಯೆ ಬಿಗ್‌ಫೈಟ್ ಏರ್ಪಟ್ಟಿದೆ. ಇದಕ್ಕೆ ತೀರಾ ಹತ್ತಿರದ ಉದಾದರಣೆ ಆಂಧ್ರ ಸಿಎಂ ಜಗನ್ಮೋಹನ್ ರೆಡ್ಡಿ ದೆಹಲಿ ತಲುಪಿದ್ದ ವಿದ್ಯಮಾನ ಕಣ್ಣ ಮಂದಿದೆ. ಅದೇ ರೀತಿಯಾಗಿ ಮತ್ತೊಂದು ಕಡೆ ಟಿಡಿಪಿಯ ಚಂದ್ರಬಾಬು ನಾಯ್ಡು ಕೂಡ ಅಮಿತ್ ಶಾ ಮತ್ತು ಜೆ.ಪಿ ನಡ್ಡಾರನ್ನ ಭೇಟಿ ಮಾಡಿರೊದು ದಕ್ಷಿಣದ ರಾಜಕಾರಣದಲ್ಲಿ ಸಂಚಲನವನ್ನು ಸೃಷ್ಟಿಸುತ್ತಿದೆ.