ನವದೆಹಲಿ-ಮೋದಿ ಇವತ್ತು ಎಲ್ಲೇ ಹೋದರೂ ಸಾಲುಗಟ್ಟಲೆ ಲಕ್ಷಾಂತರ ಜನರ ಸಮಾಗಮವೆ ನೆರೆದು ಬಿಟ್ಟಿರುತ್ತೆ. ಯಾಕಂದ್ರೆ ಪ್ರಧಾನಿ ಹತ್ತತ್ತಿರ ೧೦ ವರ್ಷದಲ್ಲಿ ಏನೂ ಸಾಧಿಸಿದ್ದಾರೋ, ಏನೆಲ್ಲಾ ಮಾಡಿದ್ದಾರೋ ಅದು ಬೇರೆ ಮಾತು. ಆದ್ರೆ ಮೋದಿಯ ಮಾತಿನ ಮೋಡಿ, ಹಾವಭಾವ, ಮ್ಯಾನರಿಸಂ, ಹೀಗೆ ಎಕ್ಸೆಟ್ರಾ ಎಕ್ಸೆಟ್ರಾ ಕ್ವಾಲಿಟಿಗಳು ಅವರನ್ನ ಆ ಮಟ್ಟಿಗೆ ತಂದು ನಿಲ್ಲಿಸಿವೆ.ಮೋದಿಯವರ ವಾಕ್ಚಾತುರ್ಯ, ಅವರ ನಡೆ ನುಡಿ, ವಿದೇಶಗಳ ನಾಯಕರೊಂದಿಗೆ ನಡೆಸುವ ಮಾತುಕತೆ, ಇತರೆ ರಾಷ್ಟçಗಳ ಜೊತೆಗೆ ರಾಜತಾಂತ್ರಿಕವಾಗಿ ಭಾರತವನ್ನ ಅವರು ಮುನ್ನಡೆಸುವ ರೀತಿ ಸಹಜವಾಗಿಯೆ ನಮೋಗೆ ಒಂದಷ್ಟು ವರ್ಗಗಳ ಗೌರವ ಸಿಗುತ್ತೆ.ಹಾಗಾಂತ ಇದು ದೇಶದ ಚುನಾವಣಾ ರಂಗದಲ್ಲಿ ಸಫಲವಾಗುತ್ತೆ ಅಂತ ಹೇಳೋದಕ್ಕೆ ಆಗಲ್ಲ.
ಹಾಗೇ ನೋಡಿದರೇ, ಪ್ರಧಾನಿ ಮೋದಿಯವರು, ಕರುನಾಡಿನ ಚುನಾವಣಾ ಸಂದರ್ಭದಲ್ಲಿ ಸಾಲು ಸಾಲು ಭೆಟಿಯನ್ನ ಕೊಟ್ಟದ್ದಲ್ಲದೇ, ಹಲವು ಚುನಾವಣಾ ರ‍್ಯಾಲಿಗಳನ್ನು ನಡೆಸಿದ್ದರು.ಆದರೂ ಕೂಡ ಅತ್ಯಂತ ಹೀನಾಯವಾಗಿ ಬಿಜೆಪಿಯೂ ಮಕಾಡೆ ಮಲಗಿ ಮುಖಭಂಗವನ್ನು ಅನುಭವಿಸಿತ್ತು ಹಾಗಾದರೇ ಇಲ್ಲಿ ಮೋದಿಯ ಅಲೆ, ಹವಾ ವರ್ಕೌಟ್ ಆಯ್ತಾ...?ಬರೀ ಕರುನಾಡು ಮಾತ್ರವಲ್ಲ, ಇತ್ತ ಮೋದಿ ತವರು ಗುಜರಾತ್‌ನ್ನು ಬಿಟ್ಟರೆ, ದೇವಭೂಮಿಯಲ್ಲೂ ಮೋದಿಯ ಹವಾ ಅಷ್ಟಾಗಿ ವರ್ಕೌಟ್ ಆಗಲಿಲ್ಲ... ಯಾಕಂದ್ರೆ ಐಸಿಯೂನಲ್ಲಿದ್ದ ಕಾಂಗ್ರೆಸ್ ಮೊದಲ ಬಾರಿಗೆ ಹಿಮಾಚಲದಲ್ಲಿ ಕಮಾಲ್ ಮಾಡಿತ್ತು. ದೇವಭೂಮಿಯ ಜನ ಮೋದಿ ಬಂದು ಹೋದರೂ, ಅತ್ತ ಪ್ರಿಯಾಂಕ ವಾದ್ರಾ ಕೊಟ್ಟ ಗ್ಯಾರಂಟಿ ಮಾತಿಗೆ ಫಿದಾ ಆಗಿ ಹೋದ್ರು ಪರಿಣಾಮ ಮೋದಿ ಅಲೆ, ಅದೆಲ್ಲಿ ತೇಲಿ ಹೋಯ್ತೋ.
ಹಾಗೇ ಇತ್ತ ದಕ್ಷಿಣದಲ್ಲೂ ಬಿಜೆಪಿಗೆ ಅಷ್ಟಾಗಿ ಹೇಳಿಕೊಳ್ಳುವಂತ ಭದ್ರವಾದ ನೆಲೆ ಇಲ್ಲ. ಕರ್ನಾಟಕವನ್ನು ಬಿಟ್ಟರೇ ದಕ್ಷಿಣದ ರಾಜ್ಯಗಳಾದ ತೆಲಂಗಾಣ, ಕೇರಳ, ತಮಿಳುನಾಡಿನಂತಹ ರಾಜ್ಯಗಳಲ್ಲಿ ಮೋದಿ ನೂರು ಭಾರೀ ಬಂದು ಹೋದರೂ ಒಂದು ಎರಡು ಸೀಟ್ ಗೇಲ್ಲೋದೆ ಹೆಚ್ಚು...! ಹಾಗಾಗಿ ಈ ಭಾರಿಯ ಲೋಕಸಮರದಲ್ಲಿ ಮೋದಿ ತಮಿಳುನಾಡಿನ ಲೋಕಸಭಾ ಕ್ಷೇತ್ರ ಒಂದರಿAದ ಸ್ಪರ್ಧೆ ಮಾಡುವ ಚರ್ಚೆಯೂ ನಡೆದಿತ್ತು. ಮೋದಿನೇ ಕಾಶಿ, ಬಳಿಕ ದಕ್ಷಿಣ ಭಾರತದ ಕಡೆಗೆ ಬರ್ತಾರೇ ಅನ್ನುವ ಸುದ್ದಿ ಸದ್ದು ಮಾಡಿತ್ತು.