Publish Date: Mon, 19 Sep 2022 (16:28 IST)
Updated Date: Mon, 19 Sep 2022 (17:33 IST)
ತಾಡೇಪಲ್ಲಿ ಪೊಲೀಸರ ಪ್ರಕಾರ, ಯುವಕ ತಾಡೇಪಲ್ಲಿಯ ಬಹುಮಹಡಿ ಕಟ್ಟಡದಲ್ಲಿ ತಂಗಿದ್ದು, ನಗರದ ವಿಶ್ವವಿದ್ಯಾಲಯವೊಂದರಲ್ಲಿ ಬಿಬಿಎ ವ್ಯಾಸಂಗ ಮಾಡುತ್ತಿದ್ದಾನೆ. ವಿದ್ಯಾರ್ಥಿಗೆ (20 ವರ್ಷ) ಅಪರಿಚಿತ ಮಹಿಳೆಯಿಂದ ಕರೆ ಬಂದಿದೆ. ಬಳಿಕ ಇಬ್ಬರು ಗಂಟೆಗಟ್ಟಲೆ ಮಾತನಾಡುತ್ತಿದ್ದರು. ಮಾತಿನಲ್ಲೇ ಯುವಕನನ್ನು ಮಹಿಳೆ ಬಲೆಗೆ ಕೆಡವಿದ್ದಾಳೆ ಎನ್ನಲಾಗಿದೆ.
ಫೋನ್ನಲ್ಲಿ ಮಾತನಾಡುತ್ತಾ ನಗ್ನ ವಿಡಿಯೋ ತೆಗೆದು ಕಳುಹಿಸುವಂತೆ ಯುವಕನಿಗೆ ಮಹಿಳೆ ಕೇಳಿದ್ದಾಳೆ. ಆತ ತನ್ನ ನಗ್ನ ವಿಡಿಯೋಗಳನ್ನು ಅವಳಿಗೆ ಕಳುಹಿಸಿದ್ದಾನೆ. ಇದನ್ನೇ ಬಂಡವಾಳವನ್ನಾಗಿಸಿಕೊಂಡ ಮಹಿಳೆ ಯುವಕನಿಗೆ ಬೆದರಿಕೆ ಹಾಕಿದ್ದಾಳೆ.
ಹಣ ಕಳುಹಿಸು, ಇಲ್ಲದಿದ್ರೆ.. ನೀನು ಕಳುಹಿಸಿರುವ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವುದಾಗಿ ಮಹಿಳೆ ಬೆದರಿಕೆ ಹಾಕಿದ್ದಾಳೆ. ಹಾಗಾಗಿ ಯುವಕ ಮೊದಲು 8 ಸಾವಿರ ರೂಪಾಯಿ ಕಳುಹಿಸಿದ್ದಾನೆ. ಇಷ್ಟಕ್ಕೆ ಸುಮ್ಮನಾಗದ ಮಹಿಳೆ ಹೆಚ್ಚಿನ ಹಣ ನೀಡುವಂತೆ ಒತ್ತಾಯಿಸಿದ್ದಾಳೆ. ಇದರಿಂದ ಬೇಸತ್ತ ಸಂತ್ರಸ್ತ ಪೊಲೀಸ್ ಠಾಣೆಗೆ ಬಂದು ದೂರು ನೀಡಿದ್ದಾನೆ ಅಂತಾ ಪೊಲೀಸರು ತಿಳಿಸಿದ್ದಾರೆ. ಎಸ್‌ಎಸ್‌ಐ ರಮೇಶ್ ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.