Publish Date: Wed, 04 Sep 2019 (12:56 IST)
Updated Date: Wed, 04 Sep 2019 (15:47 IST)
ಕೋಲಾರ : ಡಿಕೆ ಶಿವಕುಮಾರ್ ಅವರನ್ನು ಇಡಿ ಅಧಿಕಾರಿಗಳು ಬಂಧಿಸಿರುವುದಕ್ಕೆ ಬಿಜೆಪಿ ವಿರುದ್ದ ಆಕ್ರೋಶಗೊಂಡ ಶಾಸಕ ಎಸ್. ಎನ್. ನಾರಾಯಣಸ್ವಾಮಿ ಕೇಂದ್ರ ಸಚಿವ ಅಮಿತ್ ಶಾ ವಿರುದ್ಧ ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದಾರೆ.
ಕೋಲಾರದಲ್ಲಿ ಪ್ರತಿಭಟನೆ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಮಿತ್ ಶಾ ಜೈಲಿಗೆ ಹೋಗಿ ಬಂದ ಒಬ್ಬ ಕೊಲೆಗಡುಕ. ದೇಶವನ್ನ ರಕ್ಷಣೆ ಮಾಡ್ತಿನಿ ಅಂತ ಗೃಹ ಖಾತೆ ತಗೊಂಡಿದ್ದಾನೆ. ಇಡಿ, ಸಿಬಿಐ, ಐಟಿಯನ್ನ ತನ್ನ ತಾಳಕ್ಕೆ ತಕ್ಕಂತೆ ಕುಣಿಸ್ತಿದ್ದಾನೆ ಎಂದು ಕಿಡಿಕಾರಿದ್ದಾರೆ.