Publish Date: Thu, 12 May 2022 (19:28 IST)
Updated Date: Thu, 12 May 2022 (19:31 IST)
ಸರ್ಕಾರಿ ನೌಕರಿಗಾಗಿ ಜನರು ಪರದಾಡುತ್ತಾರೆ. ಇಲ್ಲ ಸಲ್ಲದ ಕಷ್ಠ ಪಡುತ್ತಾರೆ..ಆದ್ರೆ, ಬೆಳಗಾವಿ ಜಿಲ್ಲೆಯಲ್ಲೊಬ್ಬ ಸರ್ಕಾರಿ ನೌಕರ ತನ್ನ ಕೆಲಸಕ್ಕೆ ಮರ್ಯಾದೆ ಕೊಡದೆ ರಂಪಾಟ ಮಾಡಿದ್ದಾನೆ. ಕರ್ತವ್ಯದಲ್ಲಿದ್ದಾಗ ಕಂಠಪೂರ್ತಿ ಕುಡಿದು ಗ್ರಾಮ ಲೆಕ್ಕಾಧಿಕಾರಿ ದುರ್ವರ್ತನೆ ಮೆರೆದಿದ್ದು, ಬೆಳಗಾವಿ ಜಿಲ್ಲೆಯ ಸವದತ್ತಿ ತಹಶೀಲ್ದಾರ್ ಚೇರಿ ಮುಂದೆ ಈ ಘಟನೆ ನಡೆದಿದೆ.. ಗ್ರಾಮಲೆಕ್ಕಾಧಿಕಾರಿ ಸಂಜು ಬೆಣ್ಣಿ ಕಂಠಪೂರ್ತಿ ಕುಡಿದು ಕಚೇರಿ ಮುಂದೆಯೇ ಮಲಗಿದ್ರೂ ಸಹ ಕಂಡು ಕಾಣದಂತೆ ತಹಶೀಲ್ದಾರ್ ವರ್ತನೆ ತೋರಿದ್ದಾರೆ..ಹಲವು ಬಾರಿ ಸಂಜು ದುರ್ವರ್ತನೆ ಕಂಡು ಸಾರ್ವಜನಿಕರು ಬೇಸತ್ತಿದ್ರು..ಇದೀಗ ಗ್ರಾಮ ಲೆಕ್ಕಾಧಿಕಾರಿಯ ರಂಪಾಟದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.