Publish Date: Wed, 09 Aug 2023 (08:27 IST)
Updated Date: Wed, 09 Aug 2023 (07:28 IST)
ಬೆಂಗಳೂರು : ಟ್ರೋಲ್ನಿಂದ ನನ್ನ ಕನ್ನಡ ಮತ್ತಷ್ಟು ಸ್ಪಷ್ಟವಾಗಲಿದೆ ಎಂದು ವಿಧಾನಸಭಾ ಸ್ಪೀಕರ್ ಯುಟಿ ಖಾದರ್ ಹೇಳಿದ್ದಾರೆ.
ಬೆಂಗಳೂರು ಪ್ರೆಸ್ ಕ್ಲಬ್ ಆಯೋಜಿಸಿದ್ದ ಸಂವಾದದಲ್ಲಿ ಮಾತನಾಡಿದ ಅವರು, ನನ್ನ ಕನ್ನಡದ ಬಗ್ಗೆ ಟ್ರೋಲ್ ಮಾಡುವವರು ಮಾಡಲಿ. ಸಹಜವಾಗಿ ಕರಾವಳಿ ಪ್ರದೇಶದವರಾದ ನಾವು ತುಳು ಭಾಷೆ ಮಾತನಾಡುವವರು ಸಿಕ್ಕಿದಾಗ ತುಳುವಿನಲ್ಲೇ ಮಾತಾಡುತ್ತೇವೆ. ಅವರ ಟ್ರೋಲ್ನಿಂದಾಗಿ ನನ್ನ ಕನ್ನಡ ಇನ್ನಷ್ಟು ಚೆನ್ನಾಗಿ ಸ್ಪಷ್ಟವಾಗಲಿದೆ ಎಂದು ಟಾಂಗ್ ಕೊಟ್ಟರು.
ಶಾಸಕರನ್ನು ಅಮಾನತು ಮಾಡಿದ್ದು ಸರಿಯೇ ಎಂದು ಕೇಳಲಾದ ಪ್ರಶ್ನೆಗೆ, ಸಂವಿಧಾನ ಪ್ರಕಾರ ನಾನು ನಡೆದುಕೊಂಡಿದ್ದೇನೆ. ಸದನ ಮುಗಿಯುವ ತನಕ ಶಾಸಕರ ಅಮಾನತು ಇತ್ತು. ಈಗ ಸದನ ಮುಗಿದಿದೆ. ಮತ್ತೆ ಚರ್ಚೆ ಬೇಡ ಎಂದರು.