ಇಂಡೋನೇಷ್ಯಾ : ಜೀವ ಉಳಿಸುವ ವೈದ್ಯ ದೇವರ ಸ್ವರೂಪವೆಂದು ಹೇಳುತ್ತಾರೆ. ಆದರೆ ಈ ದೇವರ ರೂಪದ ವೈದ್ಯನೇ ರಾಕ್ಷಸನಾಗಿ ಚಿಕಿತ್ಸೆಯ ನೆಪದಲ್ಲಿ ಯುವತಿಯೊಬ್ಬಳ ಮೇಲೆ ನಿರಂತರ ಅತ್ಯಾಚಾರ ಎಸಗುತ್ತಿದ್ದ ಘಟನೆ ಇಂಡೋನೇಷ್ಯಾದಲ್ಲಿ ನಡೆದಿದೆ.
ಹೌದು. ಬಡ ಕುಟುಂಬವೊಂದು ಚಿಕಿತ್ಸೆಗಾಗಿ ತಮ್ಮ 13 ವರ್ಷದ ಮಗಳನ್ನು ವೈದ್ಯರ ಬಳಿ ಕರೆ ತಂದಿದ್ದರು. ಆದರೆ ಆ ವೈದ್ಯನು ಚಿಕಿತ್ಸೆಗಾಗಿ ಆಕೆಯನ್ನು ಉಳಿಸಿಕೊಂಡು ಪೋಷಕರನ್ನು ಮನೆಗೆ ಕಳುಹಿಸಿದ್ದಾನೆ. ಬಳಿಕ ಆಕೆಯನ್ನು ತನ್ನ ಮನೆ ಸಮೀಪದ ಗುಹೆಯಲ್ಲಿ ಬಂಧಿಸಿಟ್ಟು ಕಳೆದ 18 ವರ್ಷಗಳಿಂದ ನಿರಂತರ ಅತ್ಯಾಚಾರ ನಡೆಸಿದ್ದಾನೆ. ಪೋಷಕರು ಮಗಳನ್ನು ವಿಚಾರಿಸಲು ಬಂದಾಗ, ಆಕೆ ಜಕಾರ್ತಾಗೆ ಹೋಗಿದ್ದಾಳೆ ಎಂದು ಸುಳ್ಳು ಹೇಳಿ ಕಳಿಸಿದ್ದನಂತೆ.
ಆದರೆ ಪೊಲೀಸರು ಈ ಪ್ರಕರಣದ ತನಿಖೆ ನಡೆಸಿದಾಗ ಆತನ ಬಣ್ಣ ಬಯಲಾಗಿದ್ದು, ಇದೀಗ ಆತ ಪೊಲೀಸರ ಅತಿಥಿಯಾಗಿದ್ದಾನೆ. ಆತನು ಗೆಳೆಯನ ಆತ್ಮದ ಕತೆಯೊಂದನ್ನು ಕಟ್ಟಿ ಯುವತಿಯನ್ನು ನಂಬಿಸಿ ತನ್ನ ಕಾಮತೃಷೆ ತೀರಿಸಿಕೊಳ್ಳುತ್ತಿದ್ದ ಎಂದು ತನಿಖಾಧಿಕಾರಿಗಳು ಅಲ್ಲಿನ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ