Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ತುಮಕೂರಿನಲ್ಲಿ ತನ್ನ ದೊಡ್ಡಮ್ಮನ ಮಗಳು ಸುಧಾಳನ್ನು ಕೊಲೆ ಮಾಡಿದ್ದ ಮಂಜುನಾಥ್ ಎಂಬ ವ್ಯಕ್ತಿ ಶಿವಮೊಗ್ಗದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ತುಮಕೂರಿನ ಕೆರೆಸೂರಗೊಂಡನಹಳ್ಳಿಯ ನಿವಾಸಿಯಾದ ಮಂಜುನಾಥ್(26) ಕೊಲೆ ಮಾಡಿ ತಲೆ ಮರೆಸಿಕೊಂಡಿದ್ದ. ಈಗ ಶಿವಮೊಗ್ಗದ ಬಸ್ ನಿಲ್ದಾಣದ ಬಳಿ ಇರುವ ಹೋಟೆಲ್ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಡೆತ್ ನೋಟ್ನಲ್ಲಿ ಕೊಲೆ ವಿಚಾರವನ್ನು ಮಂಜುನಾಥ್ ಉಲ್ಲೇಖ ಮಾಡಿದ್ದಾನೆ. ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.