ಬಹುಮನಿ ಸುಲ್ತಾನ್ ಉತ್ಸವ ಆಚರಣೆಗೆ ರಾಜ್ಯ ಸರ್ಕಾರ ಮುಂದಾಗಿರುವುದು ಒಂದೆಡೆಯಾದರೆ, ಮತ್ತೊಂದೆಡೆ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಬಹುಮನಿ ಸುಲ್ತಾನ್ ಯಾರು ಎಂದು ಪ್ರಶ್ನೆ ಮಾಡಿದ್ದಾರೆ.
ಉಡುಪಿಯಲ್ಲಿ ಮಾತನಾಡಿದ ಅವರು, ಬಹುಮನಿ ಸುಲ್ತಾನ್ ಯಾರು, ಬಹುಮನಿ ಸುಲ್ತಾನ್ ಬಗ್ಗೆ ನನಗೆ ಗೊತ್ತಿಲ್ಲ. ಆ ಕಾಲದಲ್ಲಿ ನಾನು, ನೀವು ಯಾರು ಹುಟ್ಟಿರಲಿಲ್ಲ. ಯಾವನು ಏನು ಚರಿತ್ರೆ ಬರೆದನೋ ಗೊತ್ತಿಲ್ಲ. ಚರಿತ್ರೆ ಬರೆದವರು ಅವರ ಆಲೋಚನೆ ಮತ್ತು ಮಾನಸಿಕ ಸ್ಥಿತಿಗೆ ಅನುಗುಣವಾಗಿ ಚರಿತ್ರೆ ಬರೆದಿರುತ್ತಾರೆ ಎಂದು ತಿಳಿಸಿದ್ದಾರೆ.
ಇದೇವೇಳೆ ಕುವೆಂಪು ಅವರ ಬಗ್ಗೆ ಮಾತನಾಡಿ ಕುವೆಂಪು ಅವರು ಬರೆದ ಹಾಡು ನಾಡಗೀತೆ ಆಗಿದೆ. ಆದರೆ, ಆಗಿನ ಸಂದರ್ಭದಲ್ಲಿ ವಿರೋಧ ಬಂದಿದ್ದರೆ ಅದೂ ಆಗ್ತಾ ಇರಲಿಲ್ಲವೇನೋ ಎಂದಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.