ಮೊಹಮ್ಮದ್ ನಲಪಾಡ್ ಗುಂಡಾಗಿರಿ ಪ‍್ರಕರಣಕ್ಕೆ ಸಂಬಂಧಿಸಿ ಶಾಸಕ ಎನ್.ಎ.ಹ್ಯಾರಿಸ್ ಸದನದಲ್ಲಿ ಕ್ಷಮೆ ಕೋರಿದ್ದಾರೆ.
ವಿಧಾನಸೌಧದಲ್ಲಿ ಘಟನೆಯ ಕುರಿತು ವಿವರಣೆ ನೀಡಿದ ಹ್ಯಾರಿಸ್ ಅವರು, ಸದನದ ಸದಸ್ಯನಾದರೂ, ಮೊಹಮ್ಮದ್ ನಲಪಾಡ್ ತಂದೆಯೂ ಹೌದು, ಆತ ಮುಂದೆ ತಪ್ಪು ಮಾಡದಂತೆ ನೋಡಿಕೊಳ್ಳುತ್ತೇನೆ ಎಂದು ತಿಳಿಸಿದ್ದಾರೆ.
ಕಾನೂನು ಎಲ್ಲರಿಗೂ ಸಮಾನವಾದದು, ತಪ್ಪು ಮಾಡಿದವರಿಗೆ ಶಿಕ್ಷೆ ನೀಡಬೇಕು. ಮಗನ ರಕ್ಷಣೆಗಾಗಿ ನಾನು ಸರ್ಕಾರದ ಒತ್ತಡವೇರಿಲ್ಲ. ನಾನು ಬೈದ್ ಕೂಡಲೇ ನಲಪಾಡ್ ಫೋನ್ ಸ್ವಿಚ್ ಆಫ್ ಮಾಡಿಕೊಂಡು ಹೋಗಿದ್ದ, ನನಗೆ ಸಿಕ್ಕಿದ್ದರೆ ನಾನೇ ಪೊಲೀಸ್ ಠಾಣೆಗೆ ಒಪ್ಪಿಸುತ್ತಿದ್ದೆ. ಸದನ, ಸರ್ಕಾರಕ್ಕೆ ಅಪಮಾನವಾಗಿದ್ದರೆ ಕ್ಷಮೆ ಕೋರುತ್ತೇನೆ ಎಂದಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.