Publish Date: Fri, 17 Dec 2021 (10:42 IST)
Updated Date: Fri, 17 Dec 2021 (10:44 IST)
ಚಾಮರಾಜನಗರ : ಕೌಟುಂಬಿಕ ಕಲಹದ ಹಿನ್ನೆಲೆಯಿಂದಾಗಿ ತಾಯಿಯೊಬ್ಬಳು ತನ್ನ ಮಗುವನ್ನೇ ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡ ಘಟನೆ ನಂಜನಗೂಡು ತಾಲೂಕಿನ ಗಟ್ಟವಾಡಿ ಗ್ರಾಮದಲ್ಲಿ ನಡೆದಿದೆ.
ಅನ್ನಪೂರ್ಣ(22) ಮತ್ತು ಮೋಕ್ಷಿತ್ (2) ಮೃತರು. ಗಟ್ಟವಾಡಿ ಗ್ರಾಮದ ಮಹಾದೇವ ಪ್ರಸಾದ್ ಅಲಿಯಾಸ್ ರಚ್ಚು ಎಂಬವರ ಪತ್ನಿ ಹಾಗೂ ಪುತ್ರ. ಅನ್ನಪೂರ್ಣ ಅವರು 2 ವರ್ಷಗಳ ಹಿಂದೆಯಷ್ಟೇ ರಚ್ಚುವನ್ನು ಮದುವೆಯಾಗಿದ್ದು, ಇಬ್ಬರ ನಡುವೆ ಸಣ್ಣ ಪುಟ್ಟ ವಿಚಾರಕ್ಕೆ ಆಗಾಗ ಗಲಾಟೆ ಆಗುತ್ತಿತ್ತು.
ಇದರಿಂದ ಬೇಸತ್ತ ಮಹಿಳೆ, ಮೊದಲಿಗೆ ಮಗುವನ್ನು ಬಕೆಟ್ನಲ್ಲಿರುವ ನೀರಿಗೆ ಮುಳುಗಿಸಿದ್ದಾರೆ. ನಂತರ ಕೋಣೆಯಲ್ಲಿರುವ ಫ್ಯಾನ್ಗೆ ನೇಣು ಬಿಗಿದು ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಘಟನೆಯ ಬಳಿಕ ನಂಜನಗೂಡಿನ ಡಿವೈಎಸ್ಪಿ ಗೋವಿಂದ ರಾಜು, ವೃತ್ತ ನಿರೀಕ್ಷಕ ಲಕ್ಮೀಕಾಂತ ತಳವಾರ ದೊಡ್ಡಕವಲಂದೆ, ಪಿಎಸ್ಐ ಮಹೇಂದ್ರ ಭೇಟಿ ನೀಡಿ ಪರಿಶೀಲನೆ ನಡೆಸಿದರು.
Ramya kosira
Publish Date: Fri, 17 Dec 2021 (10:42 IST)
Updated Date: Fri, 17 Dec 2021 (10:44 IST)