Publish Date: Tue, 15 Feb 2022 (08:42 IST)
Updated Date: Tue, 15 Feb 2022 (10:23 IST)
ಬೆಂಗಳೂರು : ಹುಟ್ಟಿದ ಆರೇ ತಿಂಗಳಿಗೆ ಮಗು ಸಾವಪ್ಪಿನದ ಕಾರಣ ಮನನೊಂದು ತಾಯಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಂಗಳೂರಿನ ಎಸ್.ಜಿ ಪಾಳ್ಯದ ತಾವರೆಕೆರೆಯಲ್ಲಿ ನಡೆದಿದೆ.
ಮಂಡ್ಯ ಮೂಲದ ಪಲ್ಲವಿ ಆತ್ಮಹತ್ಯೆಗೆ ಶರಣಾದ ತಾಯಿ. ಸಿದ್ದು ಎಂಬಾತನ ಜೊತೆ ಕಳೆದ ನಾಲ್ಕು ವರ್ಷಗಳಿಂದ ಪಲ್ಲವಿ ವಿವಾಹವಾಗಿತ್ತು. ಬಳಿಕ ಗರ್ಭಿಣಿಯಾದ ಆಕೆಗೆ ಗರ್ಭಪಾತವಾಗಿತ್ತು. ಆ ಬಳಿಕ ಹಲವು ದೇವರಿಗೆ ಹರಕೆ ಹೊತ್ತು ಗರ್ಭಿಣಿಯಾಗಿದ್ದರು.
ಹುಟ್ಟಿದ ಮಗುವಿಗೆ ಹೃದಯದಲ್ಲಿ ರಂದ್ರ ಇರುವುದು ಪತ್ತೆಯಾಗಿದೆ. ಸಿದ್ದು ಆಸ್ಪತ್ರೆಯೊಂದರಲ್ಲಿ ಕೆಲಸಕ್ಕಿದ್ದರು ಅದೇ ಆಸ್ಪತ್ರೆಯಲ್ಲಿ ಮಗು ಬದುಕಿಸಲು ಪ್ರಯತ್ನ ಪಟ್ಟಿದ್ದರು. ಆದರೆ ನಿನ್ನೆ ಬೆಳಗ್ಗೆ ಮನೆಯಲ್ಲಿ ಮಲಗಿದ್ದ ವೇಳೆ ಮಗು ಸಾವನ್ನಪ್ಪಿದೆ. ಬಳಿಕ ಮಗು ಕಳೆದುಕೊಂಡ ನೋವಿನಲ್ಲಿ ಡೆತ್ ನೋಟ್ ಬರೆದಿಟ್ಟು ಪಲ್ಲವಿ ಆತ್ಮಹತ್ಯೆಗೆ ಶರಣಾಗಿದ್ದಾರೆ.