Publish Date: Sat, 26 Jan 2019 (17:00 IST)
Updated Date: Sat, 26 Jan 2019 (17:02 IST)
ತನ್ನ ಒಡಲಲ್ಲಿ ಹುಟ್ಟಿದ ಅವಳಿ ಮಕ್ಕಳಿಗೆ ನೇಣು ಬಿಗಿದು ತಾಯಿ ತಾನೂ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ನಡೆದಿದೆ.
ಮೈಸೂರಿನ ಬಂಡಿಪಾಳ್ಯದಲ್ಲಿ ಈ ಮನ ಕಲುಕುವ ಘಟನೆ ನಡೆದಿದೆ. ಮೃತರನ್ನು ಬಂಡಿಪಾಳ್ಯದಲ್ಲಿ ವಾಸವಿರುವ ಆಶಾ ಗೌಡ (30), ಶೌರ್ಯ ಗೌಡ (8), ಸುಪ್ರೀತ್ ಗೌಡ (8) ಎಂದು ಗುರುತಿಸಲಾಗಿದೆ. ಆಶಾ ಪತಿ ಮಹೇಶ್ ಎಪಿಎಂಸಿಯಲ್ಲಿ ಹಮಾಲಿ ಕೆಲಸ ನಿರ್ವಹಿಸುತ್ತಿದ್ದರು. ಪತಿ-ಪತ್ನಿ ಅನ್ಯೋನ್ಯವಾಗಿಯೇ ಇದ್ದರು ಎನ್ನಲಾಗಿದೆ. ಪತಿ ಮಹೇಶ್ ಕೆಲಸಕ್ಕೆ ಹೋಗಿ ಎಷ್ಟು ಹೊತ್ತಾದರೂ ಬಾಗಿಲು ತೆರೆಯದೆ ಹೊರ ಬರದ ಕಾರಣ ಅಕ್ಕಪಕ್ಕದವರು ಹೋಗಿ ನೋಡಿದಾಗ ಈ ಘಟನೆ ಬೆಳಕಿಗೆ ಬಂದಿದೆ.
ಪತಿ-ಪತ್ನಿಯರಲ್ಲಿ ವೈಮನಸ್ಯ ಇರಲಿಲ್ಲ. ವೈಯುಕ್ತಿಕ ಕಾರಣಗಳಿಂದ ನೇಣಿಗೆ ಶರಣಾಗಿರಬೇಕೆಂದು ಹೇಳಲಾಗುತ್ತಿದೆ. ಗ್ರಾಮಾಂತರ ಪೊಲೀಸ್ ಠಾಣೆಯ ಇನ್ಸಪೆಕ್ಟರ್ ಜಯಪ್ರಕಾಶ್ ಮತ್ತು ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕುಟುಂಬದ ಸದಸ್ಯರ ಆಕ್ರಂದನ ಮುಗಿಲು ಮುಟ್ಟಿದೆ.
Jagadeesh
Publish Date: Sat, 26 Jan 2019 (17:00 IST)
Updated Date: Sat, 26 Jan 2019 (17:02 IST)