Publish Date: Tue, 27 Nov 2018 (16:10 IST)
Updated Date: Tue, 27 Nov 2018 (16:13 IST)
ತಾಯಿ, ಮಗಳು ಒಟ್ಟಿಗೆ ಸಾವನ್ನಪ್ಪಿದ ಹೃದಯ ವಿದ್ರಾವಕ ಘಟನೆ ಸಂಭವಿಸಿದೆ.
ಕುಡಿಯಲು ನೀರು ತರಲು ಹೋದ ವೇಳೆ ತಾಯಿ ಮತ್ತು ಮಗಳು ಬಾವಿಗೆ ಬಿದ್ದು ಮೃತಪಟ್ಟ ದಾರುಣ ಘಟನೆ ನಡೆದಿದೆ. ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಕಮತನೂರ ಗ್ರಾಮದಲ್ಲಿ ಈ ಘಟನೆ ನಡೆದಿದೆ.
ಬೆಳಗಿನ ಜಾವ ಬಾವಿಯಿಂದ ನೀರು ತರಲು ಹೋಗಿದ್ದ ಮಗಳು ಆಯ ತಪ್ಪಿ ಬಾವಿಗೆ ಬಿದ್ದಿದ್ದಾಳೆ. ಮಗಳನ್ನು ರಕ್ಷಿಸಲು ಹೋದ ತಾಯಿ ಕೂಡ ಸಾವನ್ನಪ್ಪಿದ್ದಾಳೆ. ಕಮತನೂರ ಗ್ರಾಮದ ನಿವಾಸಿಗಳಾದ ಭಾರತಿ ಮನೋಹರ ಕಮತೆ (45) ಮತ್ತು ಮಗಳು ಅಶ್ವಿನಿ ಕಮತೆ (21) ಮೃತಪಟ್ಟ ದುರ್ದೈವಿಗಳಾಗಿದ್ದಾರೆ. ಈ ಕುರಿತು ಸಂಕೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.