Publish Date: Wed, 27 Jul 2022 (08:21 IST)
Updated Date: Wed, 27 Jul 2022 (09:22 IST)
ಹಾಸನ : ಮನೆಯ ಮುಂದೆ ಆಟವಾಡುತ್ತಿದ್ದ ಪುಟ್ಟ ಬಾಲಕನ ಮೇಲೆ ಬೀದಿ ನಾಯಿಗಳು ದಾಳಿ ಮಾಡಿ ಗಂಭೀರವಾಗಿ ಗಾಯಗೊಳಿಸಿರುವ ಘಟನೆ ಹಾಸನ ನಗರದ 30 ನೇ ವಾರ್ಡ್ನ ಮಿರ್ಜಾಮೊಹಲ್ಲಾದಲ್ಲಿ ನಡೆದಿದೆ.
ಬಾಲಕನ ಕೈ, ಬೆನ್ನು, ಕೆನ್ನೆ ಭಾಗಕ್ಕೆ ಕಚ್ಚಿದ್ದು ಬಾಲಕನಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಮಿರ್ಜಾ ಮೊಹಲ್ಲಾ ಬಡಾವಣೆಯಲ್ಲಿ ಬೀದಿನಾಯಿಗಳ ಹಾವಳಿ ಮಿತಿಮೀರಿದ್ದು ಪ್ರತಿನಿತ್ಯ ರಸ್ತೆಯಲ್ಲಿ ಓಡಾಡುವುದೇ ಕಷ್ಟವಾಗಿದೆ.
ಮಕ್ಕಳು ಆಟ ಆಡುವಾಗ, ಶಾಲೆಯಿಂದ ಬರುವಾಗ ದಾಳಿ ಮಾಡುತ್ತಿವೆ. ಈ ಬಗ್ಗೆ ನಗರಸಭೆಗೆ ದೂರು ನೀಡಿದರೂ, ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.