ಭಾರತವು ಮಾತನಾಡಲು ಅವಕಾಶವಿಲ್ಲದ ದೇಶವಾಗಲು ಸಾಧ್ಯವಿಲ್ಲ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. ಲಂಡನ್ನಲ್ಲಿ ನಡೆದ ಐಡಿಯಾಸ್ ಫಾರ್ ಇಂಡಿಯಾ ಸಮ್ಮೇಳನದಲ್ಲಿ ಮಾತನಾಡಿದ ರಾಹುಲ್, ಪ್ರಧಾನಿ ನರೇಂದ್ರ ಮೋದಿ ಅವರನ್ನು ಗುರಿಯಾಗಿಸಿಕೊಂಡು ವಾಗ್ದಾಳಿ ನಡೆಸಿದ್ರು.. ನಾನು ಕೇಳಲು ಬಯಸುತ್ತೇನೆ ಎಂಬ ಮನೋಭಾವವನ್ನು ಪ್ರಧಾನಿಯಾದವರು ಹೊಂದಿರಬೇಕು. ಆದರೆ ನಮ್ಮ ಪ್ರಧಾನಿ ಮಾತುಗಳನ್ನು ಕೇಳಿಸಿಕೊಳ್ಳುತ್ತಿಲ್ಲ ಎಂದು ಟೀಕಿಸಿದ್ದಾರೆ. ಅಲ್ಲದೇ, ಮಾತನಾಡಲು ಅನುಮತಿಸದ ದೇಶವನ್ನು ಮತ್ತು ಮುಕ್ತವಾಗಿ ಮಾತನಾಡದ ಪ್ರಧಾನಿಯನ್ನು ನಾವು ಹೊಂದಲು ಸಾಧ್ಯವಿಲ್ಲ ಎಂದಿದ್ದಾರೆ..ಭಾರತವೆಂದರೆ ಜನರು ಅಂತ ನಾವು ನಂಬುತ್ತೇವೆ. ಆದರೆ ಬಿಜೆಪಿ & RSSನವರಿಗೆ ಭಾರತ ಅಂದ್ರೆ ಕೇವಲ ಭೌಗೋಳಿಕ ಪ್ರದೇಶ ಎಂದು ನಂಬುತ್ತವೆ.. ಇದು ಸೋನೆ ಕಿ ಚಿಡಿಯಾ ಆಗಿದ್ದು , ಅದರ ಪ್ರಯೋಜನಗಳು ಕೆಲವರಿಗೆ ಮಾತ್ರ ಸಿಗುತ್ತವೆ. ನಮ್ಮ ಪ್ರಕಾರ ನೀವು ದಲಿತರಾಗಿದ್ರೂ, ಬ್ರಾಹ್ಮಣರಾಗಿದ್ರೂ ಎಲ್ಲರಿಗೂ ಸಮಾನ ಪ್ರವೇಶ ಇರಬೇಕು ಎಂದು ರಾಹುಲ್ ಹೇಳಿದ್ದಾರೆ.