Publish Date: Fri, 28 Apr 2023 (18:25 IST)
Updated Date: Fri, 28 Apr 2023 (18:35 IST)
ಪ್ರಧಾನಿ ಜಾರಿಗೆ ತಂದ ಯೋಜನೆಗೆ ಬೇರೆ ಹೆಸರಿಟ್ಟು ಕಾರ್ಯಕ್ರಮ ಮಾಡ್ತಿದ್ದಾರೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಕಾಂಗ್ರಸ್ ವಿರುದ್ದ ಕಿಡಿಕಾರಿದ್ದಾರೆ.. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಯಾವ ಗ್ಯಾರಂಟಿ ಕಾರ್ಡನ್ನ ಹಂಚುತ್ತಿದ್ದಾರೆ, ಕೇಂದ್ರದಲ್ಲಿ ಅಧಿಕೃತ ವಿರೋಧ ಪಕ್ಷವೇ ಇಲ್ಲ ಅಂತಾಗಿದೆ.. ಹಾಗಾಗಿ ಪಕ್ಷವೇ ವ್ಯಾಲಿಡಿಟಿ ಕಳೆದುಕೊಂಡಿದೆ ಹಾಗಿದ್ದ ಮೇಲೆ ಯಾವ ಗ್ಯಾರಂಟಿ ಕಾರ್ಡ್ ಕೊಡ್ತಾರೆ ಎಂದು ಶೋಭಾ ಕರಂದ್ಲಾಜೆ ಕಾಂಗ್ರೆಸ್ಸಿಗರನ್ನು ಪ್ರಶ್ನಿಸಿದರು. ಏಪ್ರಿಲ್ 29ರಿಂದ ರಾಜ್ಯದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಪ್ರವಾಸ ಆರಂಭವಾಗಲಿದೆ. 29ರಂದು ಹುಮ್ನಾಬಾದ್ನಿಂದ ಮೊದಲ ಕಾರ್ಯಕ್ರಮ ಆರಂಭವಾಗಲಿದ್ದು. 9 ವಿಧಾನಸಭಾ ಕ್ಷೇತ್ರದ ಜೋಡಣೆಯಾಗಲಿದೆ. ಮೊದಲು ವಿಜಯಪುರ, ಕುಡಚಿಗೆ ಮೋದಿಯವರು ಹೋಗಲಿದ್ದಾರೆ. ಬಳಿಕ ಪ್ರಧಾನಿ ಮೋದಿಯವರು ಬೆಂಗಳೂರಿಗೆ ಆಗಮಿಸಲಿದ್ದಾರೆ ಎಂದು ಶೋಭಾ ಕರಂದ್ಲಾಜೆ ಹೇಳಿದ್ದಾರೆ.