Select Your Language

Notifications

webdunia
webdunia
webdunia
webdunia

ಮೋದಿ ರಾತ್ರಿ ವಾಸ್ತವ್ಯ : 800ಕ್ಕೂ ಹೆಚ್ಚು ಪೊಲೀಸರಿಂದ ಬಿಗಿಭದ್ರತೆ

ಮೋದಿ ರಾತ್ರಿ ವಾಸ್ತವ್ಯ : 800ಕ್ಕೂ ಹೆಚ್ಚು ಪೊಲೀಸರಿಂದ ಬಿಗಿಭದ್ರತೆ
ಬೆಂಗಳೂರು , ಸೋಮವಾರ, 13 ಫೆಬ್ರವರಿ 2023 (09:42 IST)
ನರೇಂದ್ರ ಮೋದಿ ಇಂದು ಏರೋ ಶೋ ಉದ್ಘಾಟನೆಗೆ ಹೋಗುವ ರಸ್ತೆಯ ಉದ್ದಗಲಕ್ಕೂ ಖಾಕಿ ಸರ್ಪಗಾವಲು ಮಾಡಲಾಗಿದೆ. ರಾಜಭವನ ದಿಂದ ಮೇಕ್ರಿ ಸರ್ಕಲ್ವರೆಗೂ 300 ಸಂಚಾರಿ ಪೊಲೀಸರು, 500ಕ್ಕೂ ಹೆಚ್ಚು ಲಾ ಅಂಡ್ ಅರ್ಡರ್ ಪೊಲೀಸರನ್ನ ನಿಯೋಜನೆ ಮಾಡಲಾಗಿದೆ.
 
ಏರೋ ಶೋ ನಡೆಯುವ ಸ್ಥಳದಲ್ಲಿ ಕೆಎಆರ್ಪಿ ತುಕಡಿ ಹಾಗೂ ಸಾವಿರಕ್ಕೂ ಹೆಚ್ಚು ಪೊಲೀಸರನ್ನ ಭದ್ರತೆಗೆ ನಿಯೋಜನೆ ಮಾಡಲಾಗಿದೆ. ಇನ್ನು ಕೆಲವೇ ಕ್ಷಣಗಳಲ್ಲಿ ಪ್ರಧಾನಿ ರಾಜಭವನದಿಂದ ವಿಂಡ್ಸರ್ ಮ್ಯಾನರ್, ಕಾವೇರಿ ಜಂಕ್ಷನ್, ಮೆಕ್ರಿ ಸರ್ಕಲ್ ಹೆಚ್ಕ್ಯೂಟಿಸಿಗೆ ಹೋಗಿ ಅಲ್ಲಿಂದ ಏರೋ ಶೋ ನಡೆಯುತ್ತಿರೋ ಸ್ಥಳಕ್ಕೆ ಹೆಲಿಕಾಪ್ಟರ್ನಲ್ಲಿ ತಲುಪಲಿದ್ದಾರೆ. 

ಕೆಐಎಎಲ್ಗೆ ತೆರಳುವ ಪ್ರಯಾಣಿಕರು ಹೆಣ್ಣೂರು ಜಂಕ್ಷನ್ ಮುಖಾಂತರ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತೆರಳಲು ಸೂಚನೆ ನೀಡಲಾಗಿದೆ. ಏರ್ ಪೋರ್ಟ್ ರಸ್ತೆಯಲ್ಲಿ ವಾಹನ ದಟ್ಟಣೆ ಹೆಚ್ಚಾಗುತ್ತಿರುವ ಹಿನ್ನೆಲೆ ಎಲಿವೇಟೆಡ್ ಫ್ಲೈಓವರ್ ಮೇಲೆ ಸಾರ್ವಜನಿಕ ವಾಹನಗಳಿಗೆ ನಿಷೇಧ ಹೇರಲಾಗಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ರಾಜಭವನದಲ್ಲಿ ಮೋದಿ ರಾತ್ರಿ ವಾಸ್ತವ್ಯ