Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ರಾಜ್ಯ ರಾಜಧಾನಿಗೆ ಪ್ರಧಾನಿ ಮೋದಿ ಆಗಮಿಸಿ ತೆರಳಿ ಇಂದಿಗೆ ಮೂರೇ ದಿನ ಆಗಿದ್ದು, ಅಷ್ಟರಲ್ಲೇ ಕೋಟಿ ಕೋಟಿ ಖರ್ಚು ಮಾಡಿ ಮಾಡಲಾಗಿದ್ದ ಕೊಮ್ಮಘಟ್ಟ ರಸ್ತೆಯೇ ಇದೀಗ ಕಿತ್ತುಹೋಗಿರುವ ಘಟನೆ ಬೆಳಕಿಗೆ ಬಂದಿದೆ. ಇನ್ನು ಒಂದು ದಿನ ಬೆಂಗಳೂರಿನಲ್ಲಿ ಇದ್ದ ಮೋದಿಗಾಗಿ ಹತ್ತಾರು ಕೋಟೆ ಖರ್ಚಾಗಿದೆ. ಆದರೇ ಮೂರೇ ದಿನಕ್ಕೆ ಇದೀಗ ರಸ್ತೆಯಲ್ಲಿ ಹೊಂಡ ನಿರ್ಮಾಣವಾಗಿದ್ದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಜೊತೆಗೆ ಬಿಬಿಎಂಪಿ ಕಳಪೆ ಕಾಮಗಾರಿ ಬಟಬಯಲಾಗಿದೆ. ಈ ಬಗ್ಗೆ ಬಿಬಿಎಂಪಿ ವಿಶೇಷ ಆಯುಕ್ತ ರಾಮ್ ಮೋಹನ್ ಪ್ರಸಾದ್ ಮಾತನಾಡಿ ಕಾಮಗಾರಿ ಸಂದರ್ಭದಲ್ಲಿ ಮಳೆ ಬಂದಿರೋದ್ರಿಂದ ಟಾರ್ ಸರಿಯಾಗಿ ಗಟ್ಟಿಯಾಗಿಲ್ಲ ಹಾಗಾಗಿ ಕೆಲವೊಂದು ಕಡೆಗಳಲ್ಲಿ ಎದ್ದಿದೆ ಅಷ್ಟೇ ಗುತ್ತಿದಾರರನ ವೆಚ್ಚದಿಂದಲೇ ಮತ್ತೆ ಕಾಮಗಾರಿ ಮಾಡಲಾಗುತ್ತದೆ ಮಾಹಿತಿ ನೀಡಿದ್ದಾರೆ.