Publish Date: Thu, 27 Apr 2023 (18:15 IST)
Updated Date: Thu, 27 Apr 2023 (19:20 IST)
ಬಿಜೆಪಿ ಕಾರ್ಯಕರ್ತರೊಂದಿಗೆ ಪ್ರಧಾನಿ ನರೇಂದ್ರ ಮೋದಿ ನಡೆಸಿದ ಸಂವಾದ ಕಾರ್ಯಕ್ರಮದಲ್ಲಿ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮಾತನಾಡಿದ್ದಾರೆ. ರಾಜ್ಯದಲ್ಲಿ ಚುನಾವಣೆ ರಣರಂಗ ಆರಂಭವಾಗಿದೆ.. ಬಿಜೆಪಿಯನ್ನು ಮತ್ತೊಮ್ಮೆ ಅಧಿಕಾರಕ್ಕೆ ತರಲು ಹಗಲು, ರಾತ್ರಿ ಕಾರ್ಯಕರ್ತರು ಕೆಲಸ ಮಾಡ್ತಿದ್ದಾರೆ.. ನಮ್ಮೆಲ್ಲರಿಗೂ ಪ್ರೇರಣಾ ಶಕ್ತಿ ಕೊಡ್ತಿರೋದು ಪ್ರಧಾನಿ ನರೇಂದ್ರ ಮೋದಿಯವರು ಎಂದು ತಿಳಿಸಿದ್ರು.. ಪ್ರಧಾನಿ ನರೇಂದ್ರ ಮೋದಿ ಚುನಾವಣೆ ಘೋಷಣೆಗು ಮುನ್ನ ರಾಜ್ಯಕ್ಕೆ 15 ಬಾರಿ ಭೇಟಿ ಕೊಟ್ಟು, ಇಡೀ ರಾಜ್ಯದಲ್ಲಿ ರಾಜಕೀಯ ಬದಲಾವಣೆ ತಂದಿದ್ದಾರೆ ಎಂದು ಪ್ರಧಾನಿ ಮೋದಿಯನ್ನು ಹಾಡಿ ಹೊಗಳಿದ್ರು. ಬಿಜೆಪಿಗೆ ಈ ಬಾರಿ ಬಹುಮತ ಬಂದು, ಅಧಿಕಾರಕ್ಕೆ ಬರುತ್ತೆ ಎಂಬ ವಿಶ್ವಾಸ ಕಾರ್ಯಕರ್ತರಲ್ಲಿ ಬಂದಿದೆ ಎಂದು ತಿಳಿಸಿದ್ರು.