ದೆಹಲಿ(ಜು.28): ಪ್ರಧಾನಿ ನಮ್ಮ ಫೋನ್ಗಳಲ್ಲಿ ಆಯುಧವನ್ನು ಸೇರಿಸಿದ್ದಾರೆ. ಅದನ್ನು ಭಾರತದ ಪ್ರಜಾಪ್ರಭುತ್ವದ ಆತ್ಮಕ್ಕೆ ಹೊಡೆಯಲು ಬಳಸಿದ್ದಾರೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ.
•ಪೆಗಾಸಸ್ ಕುರಿತು ಪ್ರಧಾನಿ ಮೋದಿ ಅವರನ್ನು ಟೀಕಿಸಿದ ರಾಹುಲ್ ಗಾಂಧಿ
•ನಮ್ಮ ಫೋನಲ್ಲಿ ಮೋದಿ ವೆಪನ್ ಇಟ್ಟಿದ್ರು ಎಂದ ಕಾಂಗ್ರೆಸ್ ನಾಯಕ
ಪೆಗಾಸಸ್ ಬಗ್ಗೆ ಪ್ರತಿಕ್ರಿಸಿದ ಅವರು, ಈಗ ಸಂಸತ್ತಿನಲ್ಲಿ ಪ್ರತಿಪಕ್ಷಗಳ ಬೇಡಿಕೆಗಳ ಬಾಯಿ ಮುಚ್ಚಿಸಲು ಸರ್ಕಾರ ಪ್ರಯತ್ನಿಸುತ್ತಿದೆ ಎಂದಿದ್ದಾರೆ. ವಿರೋಧ ಪಕ್ಷಗಳ ಸಭೆಯ ನಂತರ ಸುದ್ದಿಗಾರರನ್ನುದ್ದೇಶಿಸಿ ಮಾತನಾಡಿದ್ದಾರೆ.
ಸಂಸತ್ತಿನಲ್ಲಿ ನಮ್ಮ ಧ್ವನಿಯನ್ನು ಅಡಗಿಸಲಾಗುತ್ತಿದೆ. ಪೆಗಾಸಸ್ ಸಾಫ್ಟ್ವೇರ್ ಖರೀದಿಸಲಾಗಿದೆಯೇ ? ಭಾರತದ ಕೆಲವು ವ್ಯಕ್ತಿಗಳ ವಿರುದ್ಧ ಬಳಸಲಾಗಿದೆಯೇ ಎಂದು ಮಾತ್ರ ನಾವು ಕೇಳುತ್ತಿದ್ದೇವೆ ಎಂದು ಅವರು ಪ್ರಶ್ನಿಸಿದ್ದಾರೆ.
ನಿಮ್ಮ ಫೋನ್ಗಳಲ್ಲಿ ನರೇಂದ್ರ ಮೋದಿ ಅವರು ನೆಟ್ಟಿರುವ ಆಯುಧವಿದೆ. ವಿರೋಧ ಪಕ್ಷದ ನಾಯಕರು, ಪತ್ರಕರ್ತರು, ಕಾರ್ಯಕರ್ತರ ವಿರುದ್ಧ ಬಳಸಲಾಗಿದೆ ಎಂದಿದ್ದಾರೆ.
ಕಾಂಗ್ರೆಸ್ ಮತ್ತು ಶಿವಸೇನೆ ಹೊರತುಪಡಿಸಿ, ಸಿಪಿಐ ಮತ್ತು ಸಿಪಿಎಂ, ರಾಷ್ಟ್ರೀಯ ಜನತಾದಳ, ಎಎಪಿ, ಡಿಎಂಕೆ, ಎನ್ಸಿಪಿ, ರಾಷ್ಟ್ರೀಯ ಸಮ್ಮೇಳನ ಮತ್ತು ಸಮಾಜವಾದಿ ಪಕ್ಷ ಇಂದಿನ ಸಭೆಯಲ್ಲಿ ಭಾಗವಹಿಸಿದ್ದವು