Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಪ್ರಧಾನ ಮಂತ್ರಿಯವರಿಗೆ ಬಿಜೆಪಿಯವರು ಕೊಟ್ಟಿರುವ ಗ್ಯಾರಂಟಿ ಸ್ಕೀಂಗಳ ಬಗ್ಗೆ ಗೊತ್ತಿಲ್ಲ ಎನಿಸುತ್ತದೆ.. ಸ್ವತಃ ಬಸವರಾಜ ಬೊಮ್ಮಾಯಿಯವರ ಸರ್ಕಾರದ ಕಡೆಯಿಂದ ಮಾಧ್ಯಮಗಳಲ್ಲಿ ಏನು ಜಾಹಿರಾತು ಕೊಟ್ಟಿದ್ದಾರೆ ಅದನ್ನು ಅವರು ನೋಡಿಲ್ಲ ಅಂತಾ ಸರ್ಕಾರದ ವಿರುದ್ದ KPCC ಅಧ್ಯಕ್ಷ D.K.ಶಿವಕುಮಾರ್ ಕಿಡಿಕಾರಿದ್ರು. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಆದರೂ ನಾವು ಪ್ರಧಾನಿಯವರ ಗಮನ ಸೆಳೆದಿದ್ದೇವೆ ಅನ್ನೋ ಸಂತೋಷ ನಮಗಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೊದಲ ದಿನದ ಕ್ಯಾಬಿನೆಟ್ನಲ್ಲೇ ನಮ್ಮ ನಾಲ್ಕೂ ಗ್ಯಾರಂಟಿಯನ್ನು ಜಾರಿಗೊಳಿಸುತ್ತೇವೆ. ಜೂನ್ನಲ್ಲಿ ಕಾಂಗ್ರೆಸ್ ಸರ್ಕಾರ ರಚನೆ ಆಗುತ್ತದೆ ಅಂತಾ D.K.ಶಿವಕುಮಾರ್ ಹೇಳಿದ್ರು