Publish Date: Monday, 25 July 2022 (14:33 IST)
Updated Date: Monday, 25 July 2022 (14:34 IST)
ಮಾರ್ಡನ್ ರೈತ ಎಂದು ಪ್ರಸಿದ್ದಿ ಪಡೆದಿದ್ದ ಈ ಶಶಿ ಕುಮಾರ್ ಸ್ಪರ್ಧೆಯ ನಂತರ ಬಹಳ ಸುದ್ದಿಯಲ್ಲಿದ್ದರು. ಆದರೆ ನಂತರ ಅವರು ಎಲ್ಲೂ ಕಾಣಿಸಿಕೊಂಡಿರಲಿಲ್ಲ. ನಂತರ ಒಂದು ಸಿನಿಮಾ ಮಾಡುತ್ತಿದ್ದ ಬಗ್ಗೆ ಸಹ ವಿಚಾರ ಕೇಳಿ ಬಂದಿತ್ತು. ಆದರೆ ನಂತರ ಆ ಬಗ್ಗೆ ಸಹ ಮಾಹಿತಿ ಇಲ್ಲ. ಆದರೆ ಸದ್ಯಕ್ಕೆ ಅವರ ವೈಯಕ್ತಿಕ ಜೀವನದ ಬಗ್ಗೆ ಸುದ್ದಿಯೊಂದು ಹರಿದಾಡುತ್ತಿದೆ. ಅದು ಅವರ ಮದುವೆ
ಶಶಿ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಮೂಲಗಳ ಪ್ರಕಾರ ಸದ್ಯದಲ್ಲೇ ಶಶಿ ಕುಮಾರ್ ಅವರು ಮದುವೆಯಾಗಲಿದ್ದಾರೆ. ಮುಂದಿನ ತಿಂಗಳು ಅಂದರೆ ಆಗಸ್ಟ್ 6 ಮತ್ತು 7 ರಂದು ಶಶಿ ಕುಮಾರ್ ಮದುವೆ ನಡೆಯಲಿದೆ