Publish Date: Sun, 17 Jul 2022 (15:17 IST)
Updated Date: Sun, 17 Jul 2022 (14:22 IST)
ನಾಳೆ ನಡೆಯಲಿರೋ ರಾಷ್ಟ್ರಪತಿ ಚುನಾವಣೆಗೆ ಕೌಂಟ್ಡೌನ್ ಶುರುವಾಗಿದ್ದು, ಚುನಾವಣೆ ಹಿನ್ನೆಲೆ ಬಿಜೆಪಿ ಶಾಸಕರಿಗೆ ಮತದಾನದ ಕ್ಲಾಸ್ ಮಾಡಲಾಗುತ್ತಿದೆ.
ರಾತ್ರಿಯೇ ಬಹುತೇಕ ಶಾಸಕರು ಖಾಸಗಿ ಹೊಟೇಲ್ಗೆ ಶಿಫ್ಟ್ ಮಾಡಲಾಗಿದ್ದು, ಸಚೇತಕ ಸತೀಶ್ ರೆಡ್ಡಿ ಶಾಸಕರ ಉಸ್ತುವಾರಿ ವಹಿಸಿಕೊಂಡಿದ್ದಾರೆ.
ರಾಷ್ಟ್ರಪತಿ ಚುನಾವಣೆಗೆ ಶಾಸಕರಿಗೆ ಅಣಕು ಮತದಾನದ ಕ್ಲಾಸ್ ನಡೆಯಲಿದ್ದು, ಮಾಜಿ ಚುನಾವಣಾ ಅಧಿಕಾರಿಯಿಂದ ಶಾಸಕರಿಗೆ ಪಾಠ ಮಾಡಲಿದ್ದಾರೆ. ಕಳೆದ ವರ್ಷ 12 ಸಂಸದ ವೋಟ್ ಲ್ಯಾಪ್ಸ್ ಹಿನ್ನೆಲೆ ಮತದಾನದ ಪಾಠ ಮಾಡಲಾಗುತ್ತದೆ. ನಿನ್ನೆ ರಾತ್ರಿಯಿಂದ ನಾಳೆವರೆಗೂ ಹೋಟೆಲ್ನಲ್ಲೇ MLAಗಳ ವಾಸ್ತವ್ಯ ಹೂಡಲಿದ್ದು, ಇಂದು ರಾತ್ರಿ ಹೋಟೆಲ್ನಲ್ಲೇ ಇರೋ ಶಾಸಕರು, ಸಚಿವರು, ನಾಳೆ ಹೊಟೇಲ್ನಿಂದಲೇ ನಾಳೆ ಬಸ್ ಮೂಲಕ ವಿಧಾನಸೌಧಕ್ಕೆ ಹೋಗಲಿದ್ದಾರೆ. NDA ಅಭ್ಯರ್ಥಿ ದ್ರೌಪದಿ ಮುರ್ಮುಗೆ ಮತ ಹಾಕಲಿದ್ದಾರೆ.