Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಶಾಸಕ ಎಸ್.ಅರ್. ವಿಶ್ವನಾಥ್ ಹತ್ಯೆಗೆ ಸಂಚು ರೂಪಿಸಿದ ಪ್ರಕರಣದಲ್ಲಿ ಕುಳ್ಳ ದೇವರಾಜ್ ನನ್ನು ರಾಜಾನುಕುಂಟೆ ಪೊಲೀಸರು ಬಂಧಿಸಿದ್ದಾರೆ.
ವಿಚಾರಣೆಗೆ ಕರೆಸಿದ ಪೊಲೀಸರು ಕುಳ್ಳ ದೇವರಾಜ್ ನನ್ನು ಬಂಧನ ಪ್ರಕ್ರಿಯೆ ಮುಗಿಸಿದ್ದಾರೆ.ಪ್ರಕರಣ ಸಂಬಂಧ ಹೇಳಿಕೆ ನೀಡಿರುವ ಬೆಂಗಳೂರು ಗ್ರಾಮಾಂತರ ಎಸ್ಪಿ ವಂಶಿಕೃಷ್ಣ, ಶಾಸಕ ಎಸ್.ಆರ್. ವಿಶ್ವನಾಥ್ ಹತ್ಯೆಗೆ ಸಂಚು ರೂಪಿಸಿದ ಪ್ರಕರಣದಲ್ಲಿ ಕುಳ್ಳ ದೇವರಾಜ್ನನ್ನು ಅರೆಸ್ಟ್ ಮಾಡಿದ್ದೇವೆ. ಎಸ್.ಆರ್.ವಿಶ್ವನಾಥ್ ಅವರನ್ನು ವಿಚಾರಣೆಗೆ ಒಳಪಡಿಸಿದ್ದೇವೆ. ಅವರ ಬಳಿ ಇದ್ದ ದಾಖಲೆಗಳನ್ನು ತನಿಖೆಗೆ ಹಾಜರು ಪಡಿಸಿದ್ದಾರೆ. ಅದರ ಆಧಾರದ ಮೇಲೆ ಕುಳ್ಳ ದೇವರಾಜ್ ನನ್ನು ವಿಚಾರಣೆಗೆ ಕರೆಸಿ ಬಂಧಿಸಿದ್ದೇವೆ ಎಂದು ತಿಳಿಸಿದ್ದಾರೆ. ಇನ್ನು ಬಂಧಿತ ಆರೋಪಿ ಕುಳ್ಳ ದೇವರಾಜ್ ನನ್ನು ಮಹಜರು ನಡೆಸಲು ಇನ್ಸ್ಪೆಕ್ಟರ್ ನವೀನ್ ನೇತೃತ್ವದಲ್ಲಿ ಯಲಹಂಕ ಕಡೆ ಕರೆದೊಯ್ಯಲಾಗಿದೆ.
ಕುಳ್ಳ ದೇವರಾಜ್ ಜತೆ ಸಂಭಾಷಣೆ ನಡೆಸಿರುವ ಕಾಂಗ್ರೆಸ್ ಅಭ್ಯರ್ಥಿ ಗೋಪಾಲಕೃಷ್ಣ ಅವರನ್ನು ವಿಚಾರಣೆಗೆ ಒಳಪಡಿಸಲು ರಾಜಾನುಕುಂಟೆ ಪೊಲೀಸರು ಸಿದ್ಧತೆ ನಡೆಸಿದ್ದಾರೆ. ಕುಳ್ಳ ದೇವರಾಜ್ ಜತೆ ಸಂಭಾಷಣೆ ಮಾಡಿರುವ ವಿಡಿಯೋ, ಅಡಿಯೋ ಆಧರಿಸಿ ಗೋಪಾಲಕೃಷ್ಣ ಹೇಳಿಕೆ ಪಡೆಯಲಿದ್ದಾರೆ. ವಿಚಾರಣೆಯಲ್ಲಿ ಹತ್ಯೆಗೆ ಸಂಚು ರೂಪಿಸಿದ್ದು ದೃಢಪಟ್ಟರೆ ಅತನನ್ನು ಬಂಧಿಸುವ ಸಾಧ್ಯತೆಯಿದೆ.