ಅಕ್ಟೋಬರ್ 7 ರಂದು ದಕ್ಷಿಣ ಭಾರತದ ಮಿಸ್ಟರ್ ಇಂಡಿಯಾ ಆಯ್ಕೆಗೆ ನಗರದಲ್ಲಿ ಮ್ಯಾನ್ ಹಂಟ್ ಆಡಿಷನ್ ನಡೆಯಲಿದೆ.
ದೀಪಾಲಿ ಪಡ್ನಿಸ್ ನಿರ್ದೇಶನದಲ್ಲಿ ಕಳೆದ ಮೂವತ್ತು ವರ್ಷಗಳಿಂದ ಪುರುಷರ ಪ್ಯಾಶನ್ ಶೋ ಏರ್ಪಡಿಸುತ್ತ ಬಂದಿರುವ ವಿಶ್ವದ ಏಕೈಕ ಸಂಸ್ಥೆ ಮಿಸೆಸ್ ಇಂಡಿಯಾ ಪ್ರದರ್ಶನ ಪ್ರೊಡಕ್ಷನ್ ಪ್ರೈ.ಲಿ. ಸಂಸ್ಥೆ ಈ ವರ್ಷದ ದಕ್ಷಿಣ ಭಾರತದ ಮಿಸ್ಟರ್ ಇಂಡಿಯಾ ಆಯ್ಕೆಗೆ ಮ್ಯಾನ್ ಹಂಟ್ ಸೌಥ್ ಆಯ್ಕೆ ಭಾನುವಾರ ಬೆಳಿಗ್ಗೆಯಿಂದ ನಗರದ ಇನ್ಫೆಂಟ್ರಿ ರಸ್ತೆಯಲ್ಲಿರುವ ಝೋನ್ ಬೈ ದಿ ಪಾರ್ಕ್ ಹೊಟೆಲ್ನಲ್ಲಿ ನಡೆಯಲಿದೆ.
ಜಾನ್ ಅಬ್ರಾಹಂ, ದಿನೋ ಮೋರಿಯಾ, ರಾಜೀವ್ ಸಿಂಗ್ರಂತ ಮಾಡೆಲ್ಗಳನ್ನು ವಿಶ್ವಕ್ಕೆ ಕೊಡುಗೆಯಾಗಿ ನೀಡಿದ ಹೆಮ್ಮೆಯ ಸಂಸ್ಥೆ. ದಕ್ಷಿಣ ಭಾರತದ ಮಿಸ್ಟರ್ ಸೌಥ್ ಆಯ್ಕೆಯ ಕಾರ್ಯಕ್ರಮವನ್ನು 2015 ರ ಮಿಸೆಸ್ ಏಷಿಯಾ ಇಂಟರ್ನ್ಯಾಷನಲ್ ಪ್ರಶಸ್ತಿ ಪುರಸ್ಕೃತೆ ಪ್ರತಿಭಾ ಸಂಶಿಮಠ ಅವರ ನೇತೃತ್ವದಲ್ಲಿ ನಡೆಯಲಿದೆ. ಮಿಸ್ಟರ್ ಸೌಥ್ ಆಯ್ಕೆ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲು 18 ರಿಂದ 35ವಯೋಮಿತಿಯೊಳಗಿನ 5.7 ಅಡಿ ಮೇಲ್ಪಟ್ಟ ಎತ್ತರ ಇರುವ ಪುರುಷರು ಪಾಲ್ಗೊಳ್ಳಬಹುದು.
pratisevents@gmail.com ತಮ್ಮ ವಿವರವನ್ನು ಕಳುಹಿಸಬಹುದು. ಅಥವಾ ನೇರವಾಗಿ ಪಾಲ್ಗೊಳ್ಳಲು ಅವಕಾಶವಿದೆ. ಪತ್ರಿಭಾ ಸಂಶಿಮಠ ಅವರಿಗೆ 9611455866 ದೂರವಾಣಿ ಮೂಲಕ ಸಂಪರ್ಕಿಸಿ ನಿಮ್ಮ ಪಾಲ್ಗೊಳ್ಳುವಿಕೆಯನ್ನು ಖಚಿತಪಡಿಸಬಹುದು.
ರಾಷ್ಟ್ರೀಯ ಮಟ್ಟದಲ್ಲಿ ಮಿಸ್ಟರ್ ಇಂಡಿಯಾ ಆಯ್ಕೆ ಅಕ್ಟೋಬರ್ 25 ರಿಂದ 27 ರವರೆಗೆ ನಡೆಯಲಿದ್ದು, ಮ್ಯಾನ್ ಹಂಟ್ ಇಂಟರ್ನ್ಯಾಷನಲ್ ಆಯ್ಕೆಯು ನವೆಂಬರ್ 26 ರಿದ ಡಿಸೆಂಬರ್ 2 ರ ವರೆಗೆ ಆಸ್ಟ್ರೇಲಿಯಾದ ಗೋಲ್ಡ್ಕೋಸ್ಟ್ ನಲ್ಲಿ ನಡೆಯಲಿದೆ.