Publish Date: Thu, 25 May 2023 (15:49 IST)
Updated Date: Thu, 25 May 2023 (14:39 IST)
ರ್ಯಾಪಿಡೋ ಬೈಕ್ ಗೆ ಕಾಯುತ್ತಿದ್ದ ಟೆಕ್ಕಿ ಮೇಲೆ ಆಟೋ ಹರಿಸಲು ಯತ್ನಿಸಲಾಗಿದೆ.ನಗರದ ಹೆಚ್ಎಸ್ಆರ್ ಲೇಔಟ್ ಸೆಕ್ಟರ್ 1ರಲ್ಲಿ ಬೆಳಗಿನ ಜಾವ 3.30ರ ಸುಮಾರಿಗೆ ಘಟನೆ ನಡೆದಿದೆ.ರ್ಯಾಪಿಡೋ ಬೈಕ್ ಬುಕ್ ಮಾಡಿ ಟೆಕ್ಕಿ ಕಾಯುತ್ತಿದ್ದ.ಈ ವೇಳೆ ರಸ್ತೆಯಲ್ಲಿ ನಿಂತಿದ್ದ ಒಂದು ಆಟೋ ನೋಡ ನೋಡುತ್ತಿದ್ದಂತೆ ಟೆಕ್ಕಿ ಮೇಲೆ ನುಗ್ಗಿದೆ.ಆಟೋ ಡಿಕ್ಕಿ ರಭಸಕ್ಕೆ ರಸ್ತೆ ಬದಿಗೆ ಟೆಕ್ಕಿ ಬಿದ್ದಿದೆ.ಆಟೋ ಚಾಲಕನ ಗಂಡಾವರ್ತನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ.ಈ ಬಗ್ಗೆ ಹೆಚ್ಎಸ್ಆರ್ ಲೇಔಟ್ ಪೊಲೀಸರಿಗೆ ದೂರು ದಾಖಲಿಸಲಾಗಿದೆ.