ವಿಧಾನಸಭೆಯಲ್ಲಿ ನಡೆದ ಸದನಕ್ಕೆ ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ್ ಅವರು ಗೈರು ಹಾಜರಿಯಾಗಿದ್ದಕ್ಕೆ ಬಿಜೆಪಿ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಪ್ರಶ್ನೋತ್ತರ ಅವಧಿಯಲ್ಲಿ ಕೇಳಿದ ಪ್ರಶ್ನೆಗಳು ಸಚಿವ ಡಾ.ಶರಣಪ್ರಕಾಶ ಪಾಟೀಲ್ ಅವರಿಗೆ ಸಂಬಂಧಪಟ್ಟಿದ್ದವು. ಆದರೆ, ಯು.ಟಿ.ಖಾದರ್ ಅವರು ಉತ್ತರಿಸುತ್ತಿದ್ದರು. ಈ ವೇಳೆ ಸಂಬಂಧಪಟ್ಟ ಸಚಿವರು ಉತ್ತರ ನೀಡಿದರೆ ಸ್ಪಷ್ಟತೆ ಇರುತ್ತದೆ ಎಂದು ಲಕ್ಷ್ಮಣ ಸವದಿ ಹೇಳಿ, ಸಚಿವರು ಎಲ್ಲಿದ್ದಾರೆ ಎಂದು ಪ್ರಶ್ನಿಸಿದರು.
ವೈಯಕ್ತಿಕ ಕೆಲಸಕ್ಕಾಗಿ ಸಭಾಧ್ಯಕ್ಷರ ಅನುಮತಿ ಪಡೆದು ಹೋಗಿದ್ದಾರೆ ಎಂದು ಖಾದರ್ ಅವರು ತಿಳಿಸಿದರು. ಸಭಾಧ್ಯಕ್ಷರು ಅನುಮತಿ ಪಡೆದಿರುವುದು ಖಚಿತ ಪಡಿಸಿದರು. ಗೋವಿಂದ ಕಾರಜೋಳ ಮಾತನಾಡಿ ವೈಯಕ್ತಿಕ ಕೆಲಸವಿದ್ದರೆ ರಾಜೀನಾಮೆ ಕೊಟ್ಟು ಹೋಗಲಿ. ಸದನದ ಕೆಲಸ ಪವಿತ್ರವಾದುದು ಖಾಸಗಿ ವ್ಯವಹಾರಗಳಿಗಾಗಿ ಗೈರು ಆಗುವುದು ಸರಿಯಲ್ಲ ಎಂದರು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.