ಮೈಸೂರು : ಸಿದ್ಧರಾಮಯ್ಯ ನಮ್ಮ ಧಮ್ ಚೆಕ್ ಮಾಡುವುದು ಬೇಡ ಎಂದು ಮೈಸೂರಿನಲ್ಲಿ ಸಚಿವ ಎಸ್.ಟಿ.ಸೋಮಶೇಖರ್ ಹೇಳಿದ್ದಾರೆ.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರ ಧಮ್ ಏನೆಂದು 5 ವರ್ಷ ಹತ್ತಿರದಿಂದ ನೋಡಿದ್ದೇನೆ. ಧಮ್ ಇದ್ದರೆ ಅಧಿವೇಶನ ಕರೆಯಲಿ ಎಂದು ಕೇಳುತ್ತಾರೆ. ಅಧಿವೇಶನ ಕರೆದರೆ ಚರ್ಚೆ ಮಾಡದೆ ಹೊರಗೆ ಹೋಗ್ತಾರೆ. ಹೊರಬಂದು ಧಮ್ ಬಗ್ಗೆ ಮಾತನಾಡುತ್ತಾರೆ. ಇದು ಕೇವಲ ರಾಜಕೀಯ ಕಾರಣಕ್ಕೆ ಹೇಳಿಕೆ ನೀಡಿದ್ದಾರೆ ಎಂದು ಅವರು ಟೀಕೆ ಮಾಡಿದ್ದಾರೆ.