ಇಂದು ಬಿಜೆಪಿ ಕೇಂದ್ರ ಕಛೇರಿಯಲ್ಲಿ ಕೇಂದ್ರ ಸಚಿವರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವರಾದ ಭಗವಂತ ಕೂಬಾ ಮಾತನಾಡಿ,
ಪ್ರಧಾನಿಯವರಿಗೆ ಒಂದೊಂದು ವಿಷಯಕ್ಕೆ ಒಂದೊಂದು ಚಿಂತನೆ ಇದೆ. ಪಾರ್ಲಿಮೆಂಟ್ ಮುಗಿಯವರೆಗೂ ಯಾರೂ ಸಹ ಹೋಗುವಂತಿಲ್ಲ. ಮೊದಲು ಇಲಾಖೆಯ ಬಗ್ಗೆ ತಿಳಿದುಕೊಳ್ಳಬೇಕು. ಪಾರ್ಲಿಮೆಂಟ್‌ನಲ್ಲಿ ತೊಡಗಿಸಿಕೊಳ್ಳಬೇಕು.
ನಾವೆಲ್ಲ ಹೊಸ ಸಚಿವರಾದ ಮೇಲೆ ಪಾರ್ಲಿಮೆಂಟ್ ಆಗುವ ತನಕ ಎಲ್ಲಿಯೂ ಹೋಗಬಾರದು ಅಂತ ಸೂಚನೆ ಇತ್ತು. ಈ ಬಗ್ಗೆ ಕರ್ನಾಟಕದಲ್ಲಿ ನ್ಯಾನೋ ಯೂರಿಯಾ ಪ್ತಸ್ತಾವನೆ ಇದೆ. ರಾಜ್ಯ ಸರ್ಕಾರ ಮೂಲ ಸೌಕರ್ಯ ಕೊಡಬೇಕಾಗಿದೆ. ಮುಂದಿನ ದಿನಗಳಲ್ಲಿ ನ್ಯಾನೋ ಯೂರಿಯಾ ಘಟಕ ತಲೆ ಎತ್ತಲಿದೆ. ಕಳೆದ 7 ವರ್ಷಗಳಿಂದಮೋದಿ ಸರ್ಕಾರದ ಐತಿಹಾಸಿಕ ನಿರ್ಣಯಗಳಿಂದ ದೇಶ ಅಭಿವೃದ್ಧಿ ಕಂಡಿದೆ ಎಂದರು.