Publish Date: Sun, 16 Sep 2018 (19:03 IST)
Updated Date: Sun, 16 Sep 2018 (19:05 IST)
ಸರ್ಕಾರ ಸುಭದ್ರವಾಗಿದೆ. ಸಚಿವ ರಮೇಶ್ ಜಾರಕಿಹೊಳಿ ಎಲ್ಲೂ ಹೋಗಿಲ್ಲ. ನನ್ನ ಜೊತೆಗಿದ್ದಾರೆ. ನಿಮಗೆ ಯಾವ ಅನುಮಾನವೂ ಬೇಡ ಹೀಗಂತ ಸಿಎಂ ಹೇಳಿದ್ದಾರೆ.
ಸರ್ಕಾರ ಸುಭದ್ರವಾಗಿದೆ. ಸಚಿವ ರಮೇಶ್ ಜಾರಕಿಹೊಳಿ ಎಲ್ಲೂ ಹೋಗಿಲ್ಲ ಎಂದು ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಸಿಎಂ ಕುಮಾರಸ್ವಾಮಿ ಹೇಳಿಕೆ ನೀಡಿದ್ದಾರೆ. ಇಂದು ನನ್ನ ರಿಸಿವ್ ಮಾಡ್ಕೊಂಡು, ಅನುಮತಿ ಪಡೆದು ತಮ್ಮ ಪೂರ್ವ ನಿಯೋಜಿತ ಮದುವೆ ಕಾರ್ಯಕ್ರಮಕ್ಕೆ ಹೋಗಿದ್ದಾರೆ ಎಂದರು.
ಶಕ್ತಿ ಇದ್ದರೆ ಸರ್ಕಾರ ಉಳಿಸಿಕೊಳ್ಳಿ ಎಂಬ ಮಾಜಿ ಡಿಸಿಎಂ ಈಶ್ವರಪ್ಪ ಹೇಳಿಕೆಗೆ ಸಿಎಂ ಗರಂ ಆದರು.
ಅವರಿಗೆ ಶಕ್ತಿ ಇದ್ದರೆ ಸರ್ಕಾರ ಉರುಳಿಸಿ ತೋರಿಸಲಿ ಎಂದು ಸಿಎಂ ಸವಾಲ್ ಹಾಕಿದ್ದಾರೆ.
ಆಪರೇಷನ್ ಕಮಲ ಎಂಬ ಮಾಧ್ಯಮದವರ ಪ್ರಶ್ನೆಗೆ, ಯಾವ ಕಮಲ ಅದು? ಎಂದು ಪ್ರಶ್ನಿಸಿದರು.
ಸರ್ವಕಾಲಕ್ಕೂ ಆಪರೇಷನ್ ಕಮಲ ಮದ್ದಲ್ಲ. ಅದಕ್ಕೆ ಜಯವೂ ದೊರಕಲ್ಲ. ಬಿಜೆಪಿಯವ್ರು ರಾಜಕೀಯ ಮಾಡೋದೇ ಹಿಂಬಾಗಿಲಿನಿಂದ. ಅವರು ಯಾವಾಗ ಸೆಡ್ಡು ಹೊಡೆದು ರಾಜಕೀಯ ಮಾಡಿದ್ದಾರೆ ಎಂದು ಲೇವಡಿ ಮಾಡಿದರು.
ಸಮ್ಮಿಶ್ರ ಸರ್ಕಾರ ಅತ್ಯಂತ ಸುಭದ್ರವಾಗಿದೆ. ಅಷ್ಟು ಸುಲಭವಾಗಿ ಯಾರೂ ಅಭದ್ರಗೊಳಿಸಲು ಸಾಧ್ಯವಿಲ್ಲ. ನಾನು ಕಿಂಗ್ ಪಿನ್ ಅಂದ್ರೆ ಅವರಿಗೆ ಯಾಕೆ ಭಯ ಶುರುವಾಯ್ತು? ನಾನೇನು ಯಾರ ಹೆಸರನ್ನು ಹೇಳಿದ್ದಿಲ್ಲ ಎಂದರು.
ಬಹುಶಃ ಸಾಮ್ರಾಟ್ ಅವರು ನಿನ್ನೆ ಏನು ಹೇಳಿಕೆ ಕೊಟ್ಟಿದ್ದಾರೆ. ಬೆಂಗಳೂರಿನ ಸಾಮ್ರಾಟರು ಬಹುಶಃ ನನಗಿಂತ ಹೆಚ್ಚು ಮಾಹಿತಿ ಅವರ ಬಳಿಯೇ ಇದೆ ಎಂದಿದ್ದಾರೆ.
ನನ್ನ ಹತ್ರಾನು ಅಧಿಕಾರಿಗಳ ವರ್ಗ ಇದೆ. ಇಂಟಲಿಜನ್ಸ್ ಇದೆ. ಕ್ರಮ ತೆಗೆದುಕೊಳ್ಳೊಕೆ ನಿನ್ನೆಯಿಂದ ಜಾರ್ಚ ಶುರುವಾಗಿದೆ ಎಂದರು.