ಐಎಂಎ ಹಗರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಏತನ್ಮಧ್ಯೆ ಸಚಿವ ಆರ್.ವಿ.ದೇಶಪಾಂಡೆಯವರನ್ನು ಭೇಟಿ ಮಾಡಿದ್ದ ಹಗರಣದ ರೂವಾರಿ ಮನ್ಸೂರ್ ಖಾನ್, ರೋಷನ್ ಬೇಗ್ ಜತೆ ಬಂದಿದ್ದ ಎನ್ನಲಾಗಿದೆ.
ಎನ್ ಓ ಸಿ ಪಡೆಯಲು ಸಚಿವ ದೇಶಪಾಂಡೆಯವರನ್ನು ಐಎಂಎ ಹಗರಣದ ಪ್ರಮುಖ ಆರೋಪಿ ಭೇಟಿ ಮಾಡಿದ್ದ. ಆಗ ರೋಷನ್ ಬೇಗ್ ಭೇಟಿ ಸಮಯದಲ್ಲಿದ್ದರು ಎನ್ನಲಾಗಿದೆ.
ಆರ್.ವಿ.ದೇಶಪಾಂಡೆಯವರೇ ರೋಷನ್ ಬೇಗ್ ಜತೆ ಮನ್ಸೂರ್ ಖಾನ್ ತಮ್ಮನ್ನು ಭೇಟಿ ಮಾಡಿದ್ದರು ಎಂಬುದನ್ನು ಹೇಳಿಕೊಂಡಿದ್ದಾರೆ.
ಒಂದು ತಿಂಗಳ ಹಿಂದೆ ಶಾಸಕ ರೋಷನ್ ಬೇಗ್ ಜತೆಗೆ ಐಎಂಎ ಮುಖ್ಯಸ್ಥ ಮನ್ಸೂರ್ ಖಾನ್ ನನ್ನನ್ನು ಭೇಟಿ ಮಾಡಿದ್ದರು. ಅವರ ಕಂಪನಿಗೆ ಎನ್ ಓ ಸಿ ನೀಡುವಂತೆ ಮನವಿ ಮಾಡಿದ್ದರು ಎಂದರು.