ಜಿಂದಾಲ್ ಉಕ್ಕು ಕಾರ್ಖಾನೆಗೆ ಜಮೀನು ನೀಡಬಾರದು. ಆದರೆ ಕೈಗಾರಿಕೆ ಅಭಿವೃದ್ಧಿಯಾಗಬೇಕಾದರೆ ಭೂಮಿ ನೀಡಬೇಕು. ಹೀಗಂತ ಅನಿಲ್ ಲಾಡ್ ಹೇಳಿದ್ದಾರೆ.
ಜಿಂದಾಲ್ ಕಾರ್ಖಾನೆಯವರು ಜಮೀನನ್ನು ಪಡೆದುಕೊಂಡರೆ ಆ ಜಮೀನನ್ನು ಬ್ಯಾಂಕ್ ಗಳಿಗೆ ಅಡ ಇಡದಂತೆ ಷರತ್ತು ಹಾಕಬೇಕು. ಹೀಗಂತ ಮಾಜಿ ಶಾಸಕ ಅನಿಲ್ ಲಾಡ್ ಹೇಳಿದ್ದಾರೆ.
ಜಿಂದಾಲ್ ಗೆ 3666 ಎಕರೆ ಜಮೀನನ್ನು 1.20 ಲಕ್ಷ ರೂ.ಗಳಂತೆ ಕೇವಲ 43 ಕೋಟಿ ರೂಪಾಯಿಗೆ ಮಾರಾಟ ಮಾಡಲು ಸರಕಾರ ಮುಂದಾಗಿದೆ. ಇದನ್ನು ಅಡ ಇಟ್ಟು ಜಿಂದಾಲ್ 3666 ಕೋಟಿ ರೂ. ಸಾಲ ಪಡೆದುಕೊಳ್ಳಲಿದೆ. ಆ ನಂತರ ಕಾರ್ಖಾನೆ ಬಂದ್ ಆದರೆ ಏನೂ ಮಾಡೋಕೆ ಆಗೋದಿಲ್ಲ. ಹೀಗಾಗಿ ಜಮೀನನ್ನು ಲೀಜ್ ಆಧಾರದಲ್ಲೇ ನೀಡಲಿ. ಕೈಗಾರಿಕೆ ಮುಚ್ಚಿದರೆ ಅದು ಸರಕಾರದ ವಶದಲ್ಲೇ ಉಳಿಯುತ್ತದೆ ಎಂದರು.
ಜಮೀನನ್ನು ಅಡ ಇಡದಂತೆ ಷರತ್ತು ಹಾಕಬೇಕು. ಆಗ ಜಿಂದಾಲ್ ಒಂದು ಎಕರೆಯನ್ನು ಖರೀದಿ ಮಾಡಲು ಮುಂದೆ ಬರೋದಿಲ್ಲ ಎಂದರು.
ಜಿಂದಾಲ್ ಸುತ್ತಮುತ್ತಲಿನ ಹಳ್ಳಿಗಳ ಜನ ಶಿಕ್ಷಣ, ಉದ್ಯೋಗ, ವಂಚನೆ, ಮೂಲಸೌಕರ್ಯ ಕೊರತೆ ಬಗ್ಗೆ ತಿಳಿಸಿದರೆ ಸದನದ ಉಪಸಮಿತಿಗೆ ನೀಡುವುದಾಗಿ ಹೇಳಿದ್ರು.