ಬೆಂಗಳೂರು : ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್ ಅವರ ಕುಟುಂಬಸ್ಥರು ಅಮೇರಿಕಾದಲ್ಲಿ ಶಾಶ್ವತವಾಗಿ ನೆಲೆಸುವುದಕ್ಕೆ ಎಲ್ಲಾ ಸಿದ್ಧತೆ ನಡೆಸಿರುವುದಾಗಿ ತಿಳಿದುಬಂದಿದೆ.
ಸಚಿವ ಎಂ.ಬಿ.ಪಾಟೀಲ್ ಅವರ ಕುಟುಂಬಸ್ಥರು ಭಾಗಶಃ ಅಥವಾ ಪೂರ್ಣ ಪ್ರಮಾಣದಲ್ಲಿ ಅಮೇರಿಕಾದಲ್ಲಿ ನೆಲೆಸಲು ತಯಾರಿ ನಡೆಸಿದ್ದಾರಂತೆ. ಇದರಿಂದಾಗಿ ಅವರ ಕುಟುಂಬ ಸದಸ್ಯರ ನಡೆಯ ಬಗ್ಗೆ ಶಂಕೆ ವ್ಯಕ್ತವಾಗಿದೆ. ಅಮೇರಿಕಾದಲ್ಲಿಯೇ ಹೂಡಿಕೆ ಮಾಡಿ ಗ್ರೀನ್ ಕಾರ್ಡ್ ಪಡೆಯುವುದಕ್ಕೆ ಪಾಟೀಲ್ ಕುಟುಂಬಸ್ಥರು ತಯಾರಿ ನಡೆಸಿದಾರೆ ಎಂದು ತಿಳಿದುಬಂದಿದೆ. ಅಮೇರಿಕಾದ ಇಮಿಗ್ರೇಷನ್ ಸಲಹೆ ಹಾಗೂ ಕಾನೂನು ಕಂಪೆನಿಗೆ ಈಗಾಗಲೇ ಸುಮಾರು ಅರ್ಧ ಕೋಟಿಯಷ್ಟು ಹಣಕಾಸು ಪಾಟೀಲ್ ಅವರ ಪತ್ನಿ ಆಶಾ ಅವರೇ ನೀಡಿರುವುದಾಗಿ ತಿಳಿದುಬಂದಿದೆ.
ಈ ಬಗ್ಗೆ ಸ್ವತಃ ಸಚಿವ ಎಂ.ಬಿ.ಪಾಟೀಲ್ ಅವರೇ ಒಪ್ಪಿಕೊಂಡಿದ್ದು,’ 'ನನ್ನ ಮಗ ಅಮೆರಿಕದಲ್ಲಿ ಓದಿದ್ದು, ಅಲ್ಲಿಯೇ ನೆಲಸಲು ತಯಾರಿ ನಡೆಸುತ್ತಿರುವುದು ಹೌದು. ಆದರೆ, ಪತ್ನಿ ಅಂಥ ಯಾವುದೇ ಯತ್ನಗಳಿಗೂ ಕೈ ಹಾಕಿಲ್ಲ,' ಎಂದು ಸ್ಪಷ್ಟಪಡಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ