Publish Date: Fri, 29 Nov 2019 (11:19 IST)
Updated Date: Fri, 29 Nov 2019 (11:21 IST)
ಹುಬ್ಬಳ್ಳಿ: ಬೈ ಎಲೆಕ್ಷನ್ ನಲ್ಲಿ ಬಿಜೆಪಿ 8 ಸ್ಥಾನ ಗೆಲ್ಲದಿದ್ರೆ ನಾನು ರಾಜೀನಾಮೆ ನೀಡುತ್ತೇನೆ. 8ಕ್ಕಿಂತ ಸ್ಥಾನ ಬಿಜೆಪಿ ಗೆದ್ರೆ ಸಿದ್ದರಾಮಯ್ಯ ರಾಜೀನಾಮೆ ನೀಡ್ತಾರಾ? ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಸವಾಲು ಹಾಕಿದ್ದಾರೆ.
ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಹುಚ್ಚ, ಅವರ ಜತೆ ಒಬ್ಬ ನಾಯಕನೂ ಇಲ್ಲ. ತಮ್ಮನ್ನು ತಾವೇ ಕುರುಬ ನಾಯಕನೆಂದು ಹೇಳ್ಕೊಂಡು ಬಂದ್ರು. ಅವರು ಬೇರೆ ಯಾವ ಕುರುಬ ನಾಯಕ ಬೆಳೆಯಲು ಬಿಟ್ಟಿದ್ದಾರೆ. ವಿಪಕ್ಷ ನಾಯಕ ಸಿದ್ದರಾಮಯ್ಯ ಓರ್ವ ಸ್ವಾರ್ಥಿ. ಅವರ ಕಾಟದಿಂದ ಎಲ್ಲರೂ ಪಕ್ಷ ಬಿಟ್ಟು ಹೊರಬರುತ್ತಿದ್ದಾರೆ ಎಂದು ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಹಡಬಿಟ್ಟಿ ದುಡ್ಡು ಎಂದು ಸಿದ್ದರಾಮಯ್ಯ ಹೇಳಿಕೆ ವಿಚಾರದ ಬಗ್ಗೆ ಮಾತನಾಡಿದ ಈಶ್ವರಪ್ಪ, ಅವರು ಕಾಂಗ್ರೆಸ್ ಗೆ ಯಾವ ಹಡಬಿಟ್ಟಿ ದುಡ್ಡಿನಿಂದ ಹೋದ್ರು. ಆಗ ಸಿದ್ದರಾಮಯ್ಯ ಬಳಿ ಯಾವ ಹಡಬಿಟ್ಟಿ ದುಡ್ಡು ಇತ್ತು? ಹಡಬಿಟ್ಟಿ ದುಡ್ಡಿನಿಂದಲ್ಲೇ ಜೆಡಿಎಸ್ ಬಿಟ್ಟು ಕಾಂಗ್ರೆಸ್ ಸೇರಿದ್ದರಾ. ಆ ಹಡಬಿಟ್ಟಿ ದುಡ್ಡಿನ ಬಗ್ಗೆ ಸಿದ್ದರಾಮಯ್ಯ ಉತ್ತರ ನೀಡಲಿ ಎಂದು ಪ್ರಶ್ನಿಸಿದ್ದಾರೆ.