Webdunia - Bharat's app for daily news and videos

Install App

ಸಚಿವ ಖಾದರ್ ರವರ ಸರಳತೆ ಎಂತಹದ್ದು ಗೊತ್ತಾ…?

Webdunia
ಗುರುವಾರ, 21 ಸೆಪ್ಟಂಬರ್ 2017 (13:01 IST)
ಮೈಸೂರು: ಶಾಸಕರು, ಸಚಿವರು ಎಂದ್ರೆ ಐಷಾರಾಮಿ ಜೀವನ ನಡೆಸುವವರು ಎಂದು ಜನಸಾಮಾನ್ಯರ ಭಾವನೆ. ದೊಡ್ಡ ದೊಡ್ಡ ಹೋಟೆಲ್ ಗಳಲ್ಲಿ ಊಟ, ಲಕ್ಷುರಿ ಕಾರುಗಳಲ್ಲಿ ಓಡಾಟ ಕಾಮನ್. ಆದರೆ ಇಲ್ಲೊಬ್ಬ ಸಚಿವರು ಪುಟ್ಟ ಟೀ ಅಂಗಡಿಯಲ್ಲಿ ಉಪಹಾರ ಸೇವಿಸಿ ಸರಳತೆ ಮೆರೆದಿದ್ದಾರೆ. ಅವರೇ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸಚಿವ ಯು.ಟಿ.ಖಾದರ್.

ದಸರಾ ಉದ್ಘಾಟನೆಗೂ ಮುನ್ನ ಎಲ್ಲರ ಕುತೂಹಲಕ್ಕೆ ಕಾರಣರಾದವರು. ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ನಡೆದ ದಸರಾ ಮಹೋತ್ಸವದ ಉದ್ಘಾಟನೆಯಲ್ಲಿ ಪಾಲ್ಗೊಳ್ಳಲು ಸಚಿವ ಯು.ಟಿ.ಖಾದರ್ ಬಂದಿದ್ದರು. ಈ ಸಂದರ್ಭದಲ್ಲಿ ಸಚಿವರು ಮಹಿಷಾಸುರನ ಪ್ರತಿಮೆ ಬಳಿ ಇರುವ ಪುಟ್ಟ ಫಾಸ್ಟ್ ಫುಡ್ ಮಳಿಗೆ ಮುಂಭಾಗ ಕುಳಿತು ಬೆಳಗಿನ ಉಪಹಾರ ಸೇವಿಸಿದರು. ಸಚಿವರ ಸರಳತೆಯ ಈ ದೃಶ್ಯ ಕ್ಯಾಮೆರಾಗಳಲ್ಲಿ ಸೆರೆಯಾಗಿದೆ.

ಸಚಿವ ಖಾದರ್ ಎಂದೂ ಆಡಂಬರದಿಂದ ಮೆರೆದವರಲ್ಲ. ಅವರ ಈ ಸರಳತನ ಅವರನ್ನ ಹತ್ತಿರದಿಂದ ಬಲ್ಲವರಿಗೆ ಗೊತ್ತೇ ಇದೆ. ತಾವು ಸಾಗುವ ಮಾರ್ಗದಲ್ಲಿ ಯಾರಿಗಾದರೂ ಅಪಘಾತವಾದರೆ ತಾವೇ ಖುದ್ದಾಗಿ ಆಸ್ಪತ್ರೆಗೆ ಕರೆದೊಯ್ಯುವ ಅಪರೂಪದ ವ್ಯಕ್ತಿತ್ವ ಅವರದು. ಆದರೆ ಇದೀಗ ಅವರ ಮತ್ತೊಂದು ಸರಳತೆಯ ಪರಿಚಯ ಮೈಸೂರಿಗರಿಗಾಗಿದೆ.

ತಾನೂ ಕೂಡ  ಸಾಮಾನ್ಯ ಎಂದು ಜನಸಾಮಾನ್ಯನ ಜತೆ ಉಪಹಾರ ಸೇವಿಸುವ ಮೂಲಕ ಮತ್ತೊಮ್ಮೆ ತಮ್ಮ ಸರಳ ವ್ಯಕ್ತಿತ್ವದ ಪರಿಚಯ ಮಾಡಿಕೊಟ್ಟಿದ್ದಾರೆ. ಸಚಿವರನ್ನ ಕಂಡ ಜನ, ರಾಜಕಾರಣಿಯ ಸರಳ ಸಜ್ಜನಿಕೆ ನೋಡಿ ಬಾಯ್ಮೇಲೆ ಬೆರಳಿಟ್ಟುಕೊಂಡು ಆಶ್ಚರ್ಯದಿಂದ ನೋಡಿದ್ದಂತು ಸುಳ್ಳಲ್ಲ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ನನ್ನ ಪಾಲಿನ ಎರಡನೇ ಅಂಬೇಡ್ಕರ್‌, ಸಿಎಂ ಸಿದ್ದರಾಮಯ್ಯನವರು: ಎಚ್‌ ಆಂಜನೇಯ ಗುಣಗಾನ

ಸಹಜ ಸ್ಥಿತಿಗೆ ಮರಲಿದ ಜಮ್ಮು ಕಾಶ್ಮೀರದ ಗಡಿಭಾಗದ ಪ್ರದೇಶಗಳು, ಶಾಲೆಗಳು ಮತ್ತೇ ಆರಂಭ

ಪಾಕಿಸ್ತಾನಕ್ಕೆ ಬೇಹುಗಾರಿಕೆ ಮಾಡಲು ಹೋಗಿ ಸಿಕ್ಕಿಬಿದ್ದವರ ಸಂಖ್ಯೆ ಕೇಳಿದ್ರೆ ಶಾಕ್ ಆಗ್ತೀರಾ

ಇದೊಂದು ಹಾಸ್ಯಾಸ್ಪದ ಕಾರ್ಯಕ್ರಮ: ಸಾಧನಾ ಸಮಾವೇಶಕ್ಕೆ ಆರ್‌ ಅಶೋಕ್ ಆಕ್ರೋಶ

ಸಾಧನಾ ಸಮಾವೇಶದಲ್ಲಿ ಸಿಎಂ ಈ ಪ್ರಶ್ನೆಗೆಲ್ಲ ಉತ್ತರಿಸಬೇಕು: ಎಚ್‌ ವಿಶ್ವನಾಥ್‌

ಮುಂದಿನ ಸುದ್ದಿ
Show comments